ADVERTISEMENT

ಬೆಳಗಾವಿಯಲ್ಲಿ ಸಿಇಟಿ ಕೌನ್ಸೆಲಿಂಗ್ ಆರಂಭ

​ಪ್ರಜಾವಾಣಿ ವಾರ್ತೆ
Published 21 ಜೂನ್ 2011, 7:10 IST
Last Updated 21 ಜೂನ್ 2011, 7:10 IST

ಬೆಳಗಾವಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಥಮ ಬಾರಿಗೆ ಬೆಳಗಾವಿಯ ಕೆಎಲ್‌ಇ ಎಂಜಿನಿ ಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಿಇಟಿ ವೈದ್ಯಕೀಯ ಸೀಟು ಹಂಚಿಕೆ ಪ್ರಕ್ರಿಯೆಯು ರಾಜ್ಯದ ಉಳಿದ ಕೇಂದ್ರ ಗಳೊಂದಿಗೆ ಇಲ್ಲಿಯೂ ಆರಂಭ ವಾಯಿತು.

ವೈದ್ಯಕೀಯ ವಿಭಾಗದಲ್ಲಿ 35ನೇ ರ‌್ಯಾಂಕ್ ಗಳಿಸಿರುವ ವಿನಯಶಂಕರ ದಂದೂರ ಬೆಂಗಳೂರಿನ ವೈದ್ಯಕೀಯ ಕಾಲೇಜನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಮೊದಲ ಕೇಂದ್ರದ ಮೊದಲ ಸೀಟು ಗಿಟ್ಟಿಸಿಕೊಂಡರು.

137ನೇ ರ‌್ಯಾಂಕ್ ಗಳಿಸಿದ್ದ ಅಕ್ಷಯ ಮಗದುಮ್ ಬೆಂಗಳೂರಿನ ವೈದ್ಯಕೀಯ ಕಾಲೇಜು, 157ನೇ ರ‌್ಯಾಂಕ್ ಗಳಿಸಿದ್ದ ಪೂಜಾ ಜಿ.ಎಸ್ ಹಾಗೂ 256ನೇ ರ‌್ಯಾಂಕ್ ಗಳಿಸಿದ್ದ ಅನುಶಾ ಕುಲಕರ್ಣಿ ಬೆಳಗಾವಿ ಸರ್ಕಾರಿ ಕಾಲೇಜು ಆಯ್ದುಕೊಂಡರು.

ಕಾಲೇಜಿನ ಆಡಳಿತ ಮಂಡಳಿ ಮುಖ್ಯಸ್ಥ ಎಸ್.ಸಿ. ಮೆಟಗುಡ್ ಅವರು ಮೊದಲ ಸೀಟು ಗಿಟ್ಟಿಸಿಕೊಂಡ ವಿನಯಶಂಕರನಿಗೆ ಪ್ರವೇಶ ಪತ್ರ ನೀಡಿದರು. ವಿಟಿಯು ಮೌಲ್ಯಮಾಪನ ಕುಲಸಚಿವ ಡಾ.ಕೃಷ್ಣಮೂರ್ತಿ,  ಪಿಯುಸಿ ಡಿಡಿಪಿಐ ಜಿ.ಎಚ್. ಕಟ್ಟಿಮನಿ, ಪ್ರಾಚಾರ್ಯ ಡಾ. ಶರಣಬಸವ ಪಿಳ್ಳಿ, ಡಾ.ಬಿ.ಕೆ. ಕೋಠಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.