ADVERTISEMENT

ಭಾರತ ಸಂಪದ್ಭರಿತ ದೇಶ: ಉಮೇಶ್‌ ಕತ್ತಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2014, 8:00 IST
Last Updated 8 ಏಪ್ರಿಲ್ 2014, 8:00 IST

ರಾಯಬಾಗ: ಜಗತ್ತಿನ ಇತಿಹಾಸದಲ್ಲಿ ಭಾರತ ದೇಶ ಸಂಪದ್ಭರಿತ ದೇಶವಾಗಿದೆ. ಅದನ್ನು ಉಳಿಸಿ ಬೆಳೆಸಲು ಮಹಾನ್ ಪುರುಷರು ಸಾಧು ಸಂತರು ದೇಶಕ್ಕೆ ಕೊಡು ಗೆಯಾಗಿ ನೀಡಿದ್ದಾರೆ. ಇಂತಹ ದೇಶವನ್ನು ಮುಂದೆಯೂ ಉಳಿಸಲು ಸದೃಢ ದೇಶಕ್ಕಾಗಿ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ತಾವೆಲ್ಲರೂ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಶಾಸಕ ಉಮೇಶ ಕತ್ತಿ ಮನವಿ ಮಾಡಿದರು.

ಗುರುವಾರ ತಾಲ್ಲೂಕಿನ ಕುಡಚಿ ಮತ ಕ್ಷೇತ್ರದ ಇಟ್ನಾಳ, ಕಪ್ಪಲಗುದ್ದಿ, ಹಂದಿಗುಂದ, ಪಾಲಬಾವಿ, ಕೋಳಿಗುಡ್ಡ, ಸಿದ್ದಾಪುರ, ಖೇಮಲಾಪುರ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಕತ್ತಿ ಪರವಾಗಿ ಮಾಜಿ ಸಚಿವ ಹಾಗೂ ಶಾಸಕ ಉಮೇಶ ಕತ್ತಿ ಹಂದಿಗುಂದದಲ್ಲಿ ಪ್ರಚಾರ ಭಾಷಣ  ಮಾಡಿ ಮಾತನಾಡಿದರು.

ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಮಾತನಾಡಿ, ಕಾಂಗ್ರೆಸ್‌ ಸರ್ಕಾರ ಮುಸ್ಲಿಂ ಮತ್ತು ದಲಿತರನ್ನು ಕೇವಲ ವೋಟ್ ಬ್ಯಾಂಕ್‌ ಮಾಡಿ ಅವರಿಗೆ ಯಾವುದೇ ಸೌಲಭ್ಯ ನೀಡಿಲ್ಲ. ಬಿಜೆಪಿ ಸರ್ಕಾರ ಐದು ವರ್ಷಗಳಲ್ಲಿ ದಲಿತರ ಕಾಲೊನಿಗಳಿಗೆ ಕಾಂಕ್ರಿಟ್‌ ರಸ್ತೆ, ಗಂಗಾ ಕಲ್ಯಾಣ  ಹಾಗೂ ನೀರಾವರಿ ಸೌಕರ್ಯ ಒದಗಿಸಿದೆ ಎಂದರು.

ಜಿ.ಪಂ.ಅಧ್ಯಕ್ಷೆ ಶಾಂತಾ ಕಲ್ಲೋಳಕರ, ಮಹೇಶ ತಮ್ಮನ್ನವರ, ಮಲ್ಲಿಕಾರ್ಜುನ, ಖಾನಗೌಡರ, ಜಿನ್ನಪ್ಪ ಅಸ್ಕಿ, ಬಸಗೌಡ ಆಸಂಗಿ, ಸುರೇಶ ಹೊಸಪೇಟೆ, ಪರಪ್ಪ ಗೋಡಿ. ಅಪ್ಪಾಸಾಬ ಬ್ಯಾಕೂಡ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.