ADVERTISEMENT

ಭೂಮಿಯ ಫಲವತ್ತತೆ ಕಾಪಾಡಲು ಶ್ರಮಿಸಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 7:30 IST
Last Updated 1 ಫೆಬ್ರುವರಿ 2011, 7:30 IST

ನಿಪ್ಪಾಣಿ: ‘ಭೂಮಿಯ ಫಲವತ್ತತೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು ಈ ಸಮಸ್ಯೆ ನಿವಾರಣೆಗೆ ಹೆಚ್ಚು ಒತ್ತು ನೀಡಬೇಕು. ಇದಕ್ಕಾಗಿ ಸಾವಯವ ಗೊಬ್ಬರವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಬೇಕು’ ಎಂದು ಬೆಳವಟಗಿಯ ನೀರು ನಿರ್ವಹಣೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಎ.ಬಿ. ಖೋತ  ಹೇಳಿದರು.ನಿಪ್ಪಾಣಿಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ನಡೆದ ವೈಜ್ಞಾನಿಕ ನೀರು ನಿರ್ವಹಣೆಯ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.

ಕೃಷಿ ವಿಜ್ಞಾನಿ ಡಾ.ಎಸ್.ರಾಜಕುಮಾರ, ಕಳೆ ಹತೋಟಿ ಕ್ರಮಗಳನ್ನು ಅನುಸರಿಸುವುದರಿಂದ ಹೆಚ್ಚು ಉತ್ಪನ್ನ ಪಡೆಯಬಹುದು ಎಂದು ಹೇಳಿದರು.ರೇಷ್ಮೆ ಕೃಷಿಕ ಫಜಲ್ ಪಠಾಣ ಮತ್ತು ಹನಿ, ತುಂತುರು ನೀರಾವರಿ ಪದ್ಧತಿಯಲ್ಲಿ ಬೇಸಿಗೆ ಶೇಂಗಾ ಬೆಳೆದ ಹರಿಶ್ಚಂದ್ರ ಶಾಂಡಗೆ ಅವರ ಹೊಲಗಳಿಗೆ ಭೇಟಿ ನೀಡಲಾಯಿತು.

ಡಾ. ಎ.ಆರ್. ಹುಂಡೇಕರ, ಡಾ.ಪಿ.ಎಸ್. ಮತ್ತಿವಾಡೆ, ಡಾ.ಎಸ್.ಎಂ. ಸಾಂಗಾವೆ ಮುಂತಾದವರು ಭಾಗವಹಿಸಿದ್ದರು. ವಿವಿಧ ಗ್ರಾಮಗಳ ಸುಮಾರು 250 ರೈತರಿಗೆ ತರಬೇತಿ ನೀಡಲಾಯಿತು.  ವಿ.ಎಸ್. ಧನ್ಯಾಳ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.