ADVERTISEMENT

ಭ್ರಷ್ಟಾಚಾರ ನಿರ್ಮೂಲನೆಗೆ ಪಣತೊಡಿ

ನಿಡಸೋಸಿಯಲ್ಲಿ ಕಾರ್ಯಕ್ರಮ: ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಸಲಹೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 5:57 IST
Last Updated 30 ಮಾರ್ಚ್ 2018, 5:57 IST
ಸಂಕೇಶ್ವರ ಸಮೀಪದ ನಿಡಸೋಸಿ ಹಿರಾಶುಗರ್ಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಮಾತನಾಡಿದರು
ಸಂಕೇಶ್ವರ ಸಮೀಪದ ನಿಡಸೋಸಿ ಹಿರಾಶುಗರ್ಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಮಾತನಾಡಿದರು   

ಸಂಕೇಶ್ವರ: ‘ಎಲ್ಲರೂ ಕೈಗೂಡಿಸಿ ಭ್ರಷ್ಟಾಚಾರವನ್ನು ಬೇರು ಸಹಿತ ಕಿತ್ತೆಸೆದು ಸಮಾಜವನ್ನು ಬದಲಿಸಬೇಕಿದೆ’ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ ಹೆಗ್ಡೆ ಅವರು ಹೇಳಿದರು.ಸಂಕೇಶ್ವರ ಸಮೀಪದ ನಿಡಸೋಸಿ ಹಿರಾಶುಗರ್ಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅವರು ಮಾತನಾಡಿ, ‘ಸ್ವಚ್ಚ ಮನಸ್ಸಿನಿಂದ ಮಾತ್ರ ನಿರ್ಮಲ ಸಮಾಜ ರೂಪಿಸಲು ಸಾಧ್ಯ. ಇದೀಗ ಬದಲಾವಣೆಗೆ ಸೂಕ್ತ ಸಮಯ ಬಂದೊದಗಿದೆ. ಈ ನಿಟ್ಟಿನಲ್ಲಿ ಯುವಕರು ತಮ್ಮ ಜವಾಬ್ದಾರಿ ಅರಿಯಬೇಕಿದೆ. ಇಂದಿನ ದಿನಗಳಲ್ಲಿ ದುರಾಸೆ ಜಾಸ್ತಿ ಆಗಿದ್ದು, ಮಾನವೀಯತೆಗೆ ಬೆಲೆ ಇಲ್ಲದಂತಾಗಿದೆ. ಜ್ವಲಂತ ಸಮಸ್ಯೆಗಳ ವಿರುದ್ಧ ಯುವಕರು ಹೋರಾಡಬೇಕಿದೆ’ ಎಂದರು.

‘ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕರಿಸಿದ್ದಪ್ಪ ಮಾತನಾಡಿ, ಪ್ರಾಧ್ಯಾಪಕ ವೃತ್ತಿಯಲ್ಲಿ ಇರುವವರು ನಿರಂತರ ಅಧ್ಯಯನ ನಿರತರಾಗಿರಬೇಕು. ಹೆಚ್ಚಿನ ಜ್ಞಾನಕ್ಕಾಗಿ ಆನ್‌ಲೈನ್ ಮಾಹಿತಿಯನ್ನೂ ಸಂಗ್ರಹಿಸಿ, ಪರಿಶೋಧಿಸಬೇಕು. ನಮಗೆ ನಾವೇ ಸವಾಲೆಸೆದು ಗೆಲ್ಲಲು ಯತ್ನಿಸಬೇಕು’ ಎಂದರು.

ಎಸ್.ಜೆ.ಪಿ.ಎನ್ ಟ್ರಸ್ಟ್‌ ಅಧ್ಯಕ್ಷ ಶಿವಲಿಂಗೇಶ್ವರ ಸ್ವಾಮೀಜಿ ಆಶೀವರ್ಚನ ನೀಡಿದರು. ಪ್ರೊ.ಎಸ್.ಬಿ.ಯಾಪಲ ಪರವಿ ಸ್ವಾಗತಿಸಿದರು. ಪ್ರಾಂಶುಪಾಲ
ರಾದ ಡಾ.ಎಸ್.ಸಿ.ಕಮತೆ ವಾರ್ಷಿಕ ವರದಿ ವಾಚಿಸಿದರು.ಸಂಸ್ಥೆಯ ನಿರ್ದೇಶಕರಾದ ಸುರೇಶ ಬೆಲ್ಲದ, ಐ.ಡಿ.ಗುದಗಿ, ಕಾರ್ಯದರ್ಶಿಗಳಾದ ಜಿ.ಎಂ.ಪಾಟೀಲ, ವಿದ್ಯಾರ್ಥಿ ಪ್ರತಿನಿಧಿಗಳಾದ ನಿಖಿಲ ಖಂಚನಾಳೆ, ಅಶ್ವಿನಿ ಪಾಟೀಲ, ವಿವಿಧ ವಿಭಾಗದ ಮುಖ್ಯಸ್ಥರು, ಸಿಬ್ಬಂದಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.