ADVERTISEMENT

ಮೂಡಲಗಿ ಸೇರ್ಪಡೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 5:06 IST
Last Updated 5 ಅಕ್ಟೋಬರ್ 2017, 5:06 IST

ಗೋಕಾಕ:  ‘ಕೌಜಲಗಿ ಪಟ್ಟಣ ಮೂಡಲಗಿ ತಾಲ್ಲೂಕಿಗೆ ಸೇರ್ಪಡೆಯಾಗಲಿ’ ಎಂದು ಮುಖಂಡ ಅರವಿಂದ ದಳವಾಯಿ ಅವರು ನೀಡಿದ ಹೇಳಿಕೆಗೆ ಕೌಜಲಗಿ ತಾಲ್ಲೂಕು ಚಾಲನೆ ಹೋರಾಟ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.

ಮಂಗಳವಾರ ಪತ್ರಿಕಾ ಹೇಳಿಕೆ ನೀಡಿರುವ ಸಮಿತಿ ಅಧ್ಯಕ್ಷ ಮಹಾದೇವಪ್ಪ ಭೋವಿ ಹಾಗೂ ಪ್ರಧಾನ ಕಾರ್ಯದರ್ಶಿ ಡಾ. ರಾಜೇಂದ್ರ ಸಣ್ಣಕ್ಕಿ ಅವರು, ‘ಅರವಿಂದ ದಳವಾಯಿ ಅವರು ಹಗುರವಾದ ಹೇಳಿಕೆ ನೀಡಿದ್ದಾರೆ. ಕೌಜಲಗಿ ತಾಲ್ಲೂಕು ರಚನೆ ಒತ್ತಾಯಿಸಿ ಹೋರಾಟ ಮಾಡುತ್ತಿರುವುದು ಅವರಿಗೆ ಗೊತ್ತಿದ್ದರು ರಾಜಕೀಯ ದುರುದ್ದೇಶದಿಂದ ವ್ಯತಿರಿಕ್ತ ಹೇಳಿಕೆ ನೀಡಿರುವುದು ಖಂಡನೀಯ’ ಎಂದರು.

‘ಒಂದು ವೇಳೆ ತಾಲ್ಲೂಕು ರಚನೆಯಲ್ಲಿ ಕೌಜಲಗಿಯನ್ನು ಕೈಬಿಟ್ಟು ಮೂಡಲಗಿಯನ್ನು ತಾಲ್ಲೂಕು ಕೇಂದ್ರ ಮಾಡಿದರೇ ಕೌಜಲಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳನ್ನು ಗೋಕಾಕ ತಾಲ್ಲೂಕಿನಲ್ಲಿಯೇ ಮುಂದುವರೆಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.