ADVERTISEMENT

ಮೂಡಲಗಿ: 80 ಕೊಳವೆ ಬಾವಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 2 ಮೇ 2012, 7:55 IST
Last Updated 2 ಮೇ 2012, 7:55 IST

ಮೂಡಲಗಿ:  `ಮೂಡಲಗಿ ಪುರಸಭೆ ವ್ಯಾಪ್ತಿಯಲ್ಲಿ ಬರ ನಿರ್ವಹಣೆಯ ಅಡಿ ಯಲ್ಲಿ 45 ಲಕ್ಷ ರೂ. ವೆಚ್ಚದಲ್ಲಿ 80 ಕೊಳವೆ ಬಾವಿಗಳನ್ನು ಕೊರೆಸುವ ಕಾಮಗಾರಿಗೆ ಮಂಗಳವಾರ ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು `ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಕೊಳವೆ ಬಾವಿಗಳನ್ನು ನಿರ್ಮಿಸುವ ನಿರ್ಧಾರ ಮಾಡಿದ್ದು, ಪ್ರತಿ ವಾರ್ಡ್‌ದಲ್ಲಿ  2ರಂತೆ ಮತ್ತು ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಜನದಟ್ಟಣೆಯ ಸ್ಥಳಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಯಲು ಸೂಚಿಸಲಾಗಿದೆ ಎಂದು ಹೇಳಿದರು.

ಕೊಳವೆ ಬಾವಿಗಳನ್ನು ತೆಗೆದು ಅದಕ್ಕೆ ನೀರೆತ್ತುವ ಕೈಪಂಪ್‌ಗಳನ್ನು ಅಳವಡಿಸುತ್ತಿದ್ದು, ರೂ. 45 ಲಕ್ಷದಲ್ಲಿ 80 ಕೊಳವೆ ಬಾವಿಗಳನ್ನು ತೆರೆಯುತ್ತಿರುವುದು ಇದು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಹೇಳಿದರು. ನೀರಾವರಿ ಇಲಾಖೆಗೆ ಸೇರಿದ ಗಣೇಶ ನಗರದ ಗೋಕಾಕ್ ಕ್ರಾಸ್‌ದಿಂದ ಕಲ್ಮೇಶ್ವರ ವೃತ್ತ ಮತ್ತು ಗುರ್ಲಾಪುರ ಐಬಿಯಿಂದ ಧರ್ಮಟ್ಟಿ ರಸ್ತೆಯ ಕಾಲುವೆ ವರೆಗಿನ ರಸ್ತೆಯ ದುರಸ್ತಿಯನ್ನು ಪುರಸಭೆಯಿಂದ ಮಾಡಿಸುವ ಬಗ್ಗೆ ಠರಾವು ಮಾಡಿಸಿದ್ದು, ಅದಕ್ಕಾಗಿ ಸರ್ಕಾರದಿಂದ 8.75 ಕೋಟಿ ರೂ.
ಮಂಜೂರಾತಿಯನ್ನು ಮಾಡಿಸುವದಾಗಿ ತಿಳಿಸಿದರು.

ಪಟ್ಟಣದಲ್ಲಿಯ ಚರಂಡಿಗಳ ಸರಿಯಾದ ನಿರ್ವಹಣೆ ಇಲ್ಲದಿರುವ ಬಗ್ಗೆ ಪತ್ರಕರ್ತರು ಮಾಡಿದ ಪ್ರಸ್ತಾಪಕ್ಕೆ ಅದನ್ನು ಪುರಸಭೆ ಸಿಬ್ಬಂದಿಗೆ ಸೂಚಿಸಿ ಸರಿಪಡಿಸುವದಾಗಿ ತಿಳಿಸಿದರು.

ಪುರಸಭೆ ಅಧ್ಯಕ್ಷೆ ನಾಗರತ್ನಾ ಯಮಕನಮರಡಿ, ಹಿಡಕಲ್ ಡ್ಯಾಂ ನೀರಾವರಿ ಮಹಾಮಂಡಳ ಅಧ್ಯಕ್ಷ ಆರ್.ಪಿ. ಬಡಗನ್ನವರ, ಅಶೋಕ ನಾಯಕ, ಎಸ್.ಜಿ. ಢವಳೇಶ್ವರ, ಎಂ.ಎಚ್. ಸೋನವಾಲಕರ, ಬಿ.ಬಿ. ಹಂದಿಗುಂದ, ಡಿ.ಬಿ. ಪಾಟೀಲ, ಜಿ.ಟಿ. ಸೋನವಾಲಕರ, ಬಸವರಾಜ ಮುರಗೋಡ, ಆರ್.ಪಿ. ಸೋನವಾಲಕರ, ವಿಜಯ ಸೋನವಾಲಕರ, ಸಿದ್ದು ಕೊಟಗಿ, ಸಂತೋಷ ಸೋನವಾಲಕರ, ರಮೇಶ ಪ್ಯಾಟಿಗೌಡರ, ಕೆ.ಬಿ. ಪಾಟೀಲ, ದೀಪಕ ಹರ್ದಿ, ಅಜೀತ ಮನ್ನಿಕೇರಿ ಮತ್ತಿತರರು ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.