ADVERTISEMENT

ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಕೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2012, 6:10 IST
Last Updated 23 ಆಗಸ್ಟ್ 2012, 6:10 IST

ಚನ್ನಮ್ಮನ ಕಿತ್ತೂರು: `ದೇಶದ ಹಳ್ಳಿಗಳ ಮೂಲ ಕಸುಬು ಒಕ್ಕಲುತನವಾಗಿದ್ದು, ವೈಜ್ಞಾನಿಕ ಪದ್ಧತಿಯಡಿ ವ್ಯವಸಾಯ ಮಾಡುವುದರೊಂದಿಗೆ ರೈತ ಪ್ರಗತಿ ಪಥದತ್ತ ಸಾಗಬೇಕು~ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಪ್ರಗತಿಪರ ರೈತ ಡಾ. ಬಸವರಾಜ ಪರವಣ್ಣವರ ಸಲಹೆ ನೀಡಿದರು.

ಇಲ್ಲಿಗೆ ಸಮೀಪದ ಅವರಾದಿಯ ಪರವಣ್ಣವರ ಹೊಲದಲ್ಲಿ ಮಂಗಳವಾರ ಏರ್ಪಡಿಸಿದ್ದ ಮೇವು ಬೆಳೆ ಉತ್ಪಾದನಾ ಕ್ಷೇತ್ರ ಪಾಠಶಾಲೆಯ ಪ್ರಾರಂಭೋತ್ಸವ ದಲ್ಲಿ ಅವರು ಮಾತನಾಡಿದರು.

`ಕೇವಲ ಕೃಷಿಗೆ ಮಾತ್ರ ರೈತ ಜೋತು ಬೀಳಬಾರದು. ಇದರ ಜೊತೆಯಲ್ಲಿ ಉಪಕಸುಬುಗಳಾದ ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ ಕಡೆಗೂ ಗಮನ ಹರಿಸಬೇಕು. ಅಂದಾಗ ಮಾತ್ರ ರೈತ ಆರ್ಥಿಕವಾಗಿ ಸಬಲನಾಗಲು ಸಾಧ್ಯ~ ಎಂದು ಅವರು ಹೇಳಿದರು.


ತಾ.ಪಂ. ಸದಸ್ಯರಾದ ದಿನೇಶ ವಳಸಂಗ, ಸುರೇಶ ದೇವರಮನಿ, ಬಸವರಾಜ ಸಂಗೊಳ್ಳಿ, ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕ ಉಮೇಶ ಹೊಸೆಟ್ಟಿ, ಕಿತ್ತೂರು ನಾಡ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಆರ್. ವೈ. ಪರವಣ್ಣವರ ಮಾತನಾಡಿದರು.

ಧಾರವಾಡ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ಡಾ. ವಿಲಾಸ ಕುಲಕರ್ಣಿ, ಖಾನಾಪುರ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ. ಜಿ. ಪಿ. ಮನಗೂಳಿ, ಮೇವು ಬೆಳೆಯುವ ವಿಧಾನದ ಬಗ್ಗೆ ಉಪನ್ಯಾಸ ನೀಡಿದರು.
ಜಿ.ಪಂ. ಸದಸ್ಯ ಯಲ್ಲಪ್ಪ ವಕ್ಕುಂದ ಶಿಬಿರ ಉದ್ಘಾಟಿಸಿದರು. ತಾ. ಪಂ. ಸದಸ್ಯ ಶಿವಾನಂದ ತಳವಾರ, ಸಹಾಯಕ ಕೃಷಿ ನಿರ್ದೇಶಕ ಎಂ. ಬಿ. ಹೊಸಮನಿ, ಪಶು ವೈದ್ಯಾಧಿಕಾರಿ ಎಂ. ಪಿ. ದ್ಯಾಬೇರಿ, ಡಾ. ಸುದರ್ಶನ ಗಡದ, ಡಾ. ಬಿ. ಎಂ. ಗೋಮಾಡಿ, ಮಲ್ಲಪ್ಪಣ್ಣ ಪರವಣ್ಣವರ ಇತರರು ವೇದಿಕೆಯಲ್ಲಿದ್ದರು.

ಬೆಳಗಾವಿ `ಆತ್ಮ~ ಯೋಜನೆಯ ಉಪ ಯೋಜನಾ ನಿರ್ದೇಶಕ ಪಿ. ಬಿ. ಸ್ವಾಮಿ ಸ್ವಾಗತಿಸಿದರು. ಪಶುಪಾಲನೆ ಇಲಾ ಖೆಯ ಉಪನಿರ್ದೇಶಕ ಡಾ. ಬಿ. ಎಸ್. ಜಂಬಗಿ ಕಾರ್ಯಕ್ರಮ ನಿರೂಪಿಸಿದರು. ರವಿ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT