ADVERTISEMENT

ಶೀಘ್ರದಲ್ಲೇ ಸುವರ್ಣ ವಿಧಾನ ಸೌಧ ನಾಮಕರಣ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 9:55 IST
Last Updated 11 ಅಕ್ಟೋಬರ್ 2012, 9:55 IST

ಬೆಳಗಾವಿ: “ಸುವರ್ಣಸೌಧ ಕಟ್ಟಡಕ್ಕೆ ಸುವರ್ಣ ವಿಧಾನಸೌಧ ಎಂದು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು. ಆದರೆ ಅ. 11 ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಸುವರ್ಣ ವಿಧಾನಸೌಧ ಎಂಬ  ಬ್ಯಾನರ್ ಹಾಕಲಾಗುವುದು” ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ `ಪ್ರಜಾವಾಣಿ~ಗೆ ತಿಳಿಸಿದರು.

`ಸುವರ್ಣ ವಿಧಾನಸೌಧ ಎಂದು ನಾಮಕರಣ ಮಾಡುವ ಕುರಿತು ವಿಧಾನಸಭೆ ಅಧ್ಯಕ್ಷರು ಪತ್ರ ಬರೆದಿದ್ದಾರೆ. ಆದರೆ ಸಮಯ ಕಡಿಮೆ ಇರುವುದರಿಂದ ತಕ್ಷಣವೇ ಹೆಸರನ್ನು ಬದಲಾಯಿಸುವುದು ಅಸಾಧ್ಯ. ನಂತರದ ದಿನಗಳಲ್ಲಿ ಕಾನೂನು ತಜ್ಞರ ಸಲಹೆ ಪಡೆದು ಸುವರ್ಣ ವಿಧಾನಸೌಧ ಎಂದು ಘೋಷಿಸಲಾಗುವುದು. ಸಧ್ಯ ಉದ್ಘಾಟನಾ ಫಲಕದಲ್ಲಿ ಸುವರ್ಣಸೌಧ ಎಂದೇ ಇರುತ್ತದೆ~ ಎಂದು ಸ್ಪಷ್ಟಪಡಿಸಿದರು. `ಸುವರ್ಣ ವಿಧಾನಸೌಧ ಎಂದು ಹೆಸರನ್ನು ಹಾಕಲು ಸೂಚಿಸಲಾಗಿದೆ. ಈಗಾಗಲೇ ಮುಖ್ಯಮಂತ್ರಿಗಳಿಗೂ ಪತ್ರ ಬರೆಯಲಾಗಿದ್ದು, ವಿಧಾನ ಮಂಡಲದ ಕಾರ್ಯಕಲಾಪಗಳು ನಡೆಯುವುದರಿಂದ ವಿಧಾನಸೌಧ ಎಂಬ ಹೆಸರು ಬರಬೇಕುಸಿದಕ್ಕಾಗಿ ಸಚಿವ ಸಂಪುಟದ ನಿರ್ಧಾರವೂ ಬೇಕಾಗಬಹುದು. ಆಮಂತ್ರಣ ಪತ್ರಿಕೆಗಳಲ್ಲಿ ಸುವರ್ಣಸೌಧ ಎಂದು ಮುದ್ರಿಸಲಾಗಿದ್ದು, ಆದರೆ ಇದನ್ನು ಸುವರ್ಣ ವಿಧಾನಸೌಧ ಎಂದು ಕರೆಯಲಾಗುವುದು~ ಕೆ.ಜಿ.ಬೋಪಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.