ADVERTISEMENT

ಸಂಘಟನೆಯ ಮೂಲಕ ಬಡವರಿಗೆ ನೆರವಾಗಿ: ಸವದಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 5:57 IST
Last Updated 5 ಏಪ್ರಿಲ್ 2013, 5:57 IST

ತೆಲಸಂಗ: `ಸಂಘಟನೆ ಮೂಲಕ ಬಡವನ ಕಣ್ಣೀರೊರೆಸುವ ಕೆಲಸ ಮಾಡಿ' ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಗ್ರಾಮದಲ್ಲಿ ಬುಧವಾರ ಸಂಜೆ ನಡೆದ ಲಕ್ಷ್ಮಣ ಸಂಗಪ್ಪ ಸವದಿ ಅಭಿಮಾನಿಗಳ ಸಂಘದ ಒಕ್ಕೂಟ ಹಾಗೂ ಯುವ ಶಕ್ತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನನ್ನ ಹೆಸರಲ್ಲಿ ಯಾರಿಗೂ ನೋವು ಕೊಡಬೇಡಿ, ಅದನ್ನು ನಾನು ಸಹಿಸುವುದಿಲ್ಲ. ಕೆಳಗೆ ಬಿದ್ದವರನ್ನು ಮೇಲೆತ್ತಿ ನಡೆಸಿರಿ, ಬಡವರಿಗೆ, ರೈತರಿಗೆ, ದೀನ ದಲಿತರಿಗೆ ಸಾಮಾಜಿಕ ನ್ಯಾಯಕೊಡಿಸುವ ಸಲುವಾಗಿ ನನ್ನ ಹತ್ತಿರ ಬಂದರೆ ಪ್ರಾಮಾಣಿಕವಾಗಿ ನ್ಯಾಯ ದೊರಕಿಸುವ ಕೆಲಸಮಾಡುವೆ ಎಂದ ಹೇಳಿದರು.

ಜಾತಿಭೇದ ಬೇಡ, ನನಗೆ ಜಾತಿಯ ಮೇಲೆ ನಂಬಿಕೆ ಇಲ್ಲ ನನ್ನದು ಒಂದೇ ಜಾತಿ ಅದು ರೈತ ಜಾತಿ ಹೀಗಾಗಿ ಜಾತಿಯಿಂದ ಯಾವ ವ್ಯಕ್ತಿಯನ್ನು ಗುರುತಿಸಿ ಸೇವೆ ಮಾಡುವ ನಿರ್ಧಾರ ಮಾಡಬೇಡಿ ಎಂದು ಮನವಿ ಮಾಡಿದರು.

ಬಿಜೆಪಿ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶರಾವ ಬೊಂಟೊಡಕರ ಮಾತನಾಡಿ, ವ್ಯಕ್ತಿಯನ್ನು ಮುಂದಿಟ್ಟು ಪಕ್ಷ ಕಟ್ಟಿಲ್ಲ, ಧ್ಯೇಯವನ್ನು ಮುಂದಿಟ್ಟುಕೊಂಡು ಪಕ್ಷ ಕಟ್ಟಿದ್ದೇವೆ. ರೈತರ ಬೆನ್ನೆಲುಬಾಗಿ ಬಿಜೆಪಿ ಕೆಲಸ ಮಾಡಿದೆ ಎಂದು ಹೇಳಿದರು.

ಜಿಪಂ ಸದಸ್ಯೆ ವಿಜಯಲಕ್ಷ್ಮೀ ರೋಡಗಿ, ಪರಪ್ಪ ಸವದಿ, ಪ್ರಭಾಕರ ಚವ್ಹಾಣ, ಶೇಖರ ನೇಮಗೌಡ, ಸಿದ್ದಣ್ಣ ಮುದಕಣ್ಣವರ, ಅಣ್ಣಾಸಾಬ ತೆಲಸಂಗ, ಗುರುರಾಜ ಕುಂಬಾರ, ಶ್ರೀಶೈಲ ಶೆಲ್ಲೆಪ್ಪಗೋಳ, ಗುರು ಕಾಮನ್, ಡಾ. ಎಸ್.ಐ. ಇಂಚಗೇರಿ, ಸೇರಿದಂತೆ ಹಲವರು ಮಾತನಾಡಿದರು.
ಸಮಾರಂಭಕ್ಕೂ ಮೊದಲು ಶಾಸಕ ಲಕ್ಷ್ಮಣ ಸವದಿ, ಉಮೇಶರಾವ್ ಬೊಂಟೊಡಕರ ಅವ ರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.