ADVERTISEMENT

ಸಾಮಾಜಿಕ ಜವಾಬ್ದಾರಿ ನಿರ್ವಹಿಸುವ ಗುಣ ಅವಶ್ಯ

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 9:10 IST
Last Updated 13 ಜುಲೈ 2012, 9:10 IST

ಬೈಲಹೊಂಗಲ: ರೋಟರಿ ಸಂಸ್ಥೆಯ ಪ್ರಸಕ್ತ ಸಾಲಿನ ನೂತನ ಪದಾಧಿಕಾರಿ ಗಳ ಅಧಿಕಾರ ಸ್ವೀಕಾರ ಸಮಾರಂಭ ಶಿವಬಸವ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಜರುಗಿತು.ಜಿಲ್ಲಾ ಮಾಜಿ ಗೌರ‌್ನರ್ ಪ್ರಾಣೇಶ ಜಹಾಗೀರದಾರ ಮಾತನಾಡಿ, ಪ್ರತಿ ಯೊಬ್ಬರೂ ಸಾಮಾಜಿಕ ಜವಾಬ್ದಾರಿ ನಿರ್ವಹಿಸುವ ಮನೋಭಾವನೆ ಬೆಳೆಸು ವುದರ ಜೊತೆಗೆ ಜಗತ್ತಿನಲ್ಲಿ ಶಾಂತಿ ವಾತಾವರಣ ನಿರ್ಮಾಣ ಮಾಡು ವುದೇ ಸಂಸ್ಥೆಯ ಮುಖ್ಯ ಉದ್ದೇಶ ವಾಗಿದೆ ಎಂದರು.

ಜಿಲ್ಲಾ ಸಹಾಯಕ ಗೌರ‌್ನರ್ ವಿನಯ ಬೆಹಾರೆ ಪೊಲಿಯೋ ನಿರ್ಮೂಲನೆ ಹಾಗೂ ನಾಗರಿಕರ ಅವಶ್ಯಕತೆಗಳನ್ನು ಗುರುತಿಸಿ ಸೇವೆಯಲ್ಲಿ ಗಣನೀಯ ಸಾಧನೆ ಮಾಡಲಾಗಿದೆ ಎಂದು ಅವರು ಹೇಳಿದರು.
ನಿಕಟಪೂರ್ವ ಅಧ್ಯಕ್ಷ ಪ್ರಮೋದ ುಮಾರ ವಕ್ಕುಂದಮಠ ನೂತನ ಅಧ್ಯಕ್ಷ ಅರವಿಂದ ಮಾಳಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ವಿಜಯಕುಮಾರ ವಾಲಿ (ಕಾರ್ಯ ದರ್ಶಿ), ಶ್ರೀಶೈಲ ಶರಣಪ್ಪನವರ (ಖಜಾಂಚಿ), ಡಾ.ಎ.ಎಂ.ಬಾಗೇವಾಡಿ (ಉಪಾಧ್ಯಕ್ಷ), ಸುನೀಲ ಪಾಟೀಲ (ಸಹ ಕಾರ್ಯದರ್ಶಿ), ನಾಗನಗೌಡ ಪಾಟೀಲ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಹಿರಿಯ ವೈದ್ಯ ಡಾ.ಬಸವರಾಜ ಮಹಾಂತಶೆಟ್ಟಿ, ವೈದ್ಯಾಧಿಕಾರಿ ಡಾ.ಬಿ.ಜಿ. ಹುಬ್ಬಳ್ಳಿ, ಡಾ.ಎಂ.ಎಸ್. ಹೊತ್ತಗಿಮಠ, ಡಾ. ಕುಲಕರ್ಣಿ ಹಾಗೂ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಪ್ರತಿಭಾ ನ್ವಿತ ವಿದಾರ್ಥಿಗಳನ್ನು ಸತ್ಕರಿಸಲಾ ಯಿತು.

ಕೆ.ಎಲ್.ಇ. ನಿರ್ದೇಶಕರಾದ ಡಾ.ವಿಶ್ವನಾಥ ಪಾಟೀಲ,   ಡಾ.ವಿ. ಎಸ್. ಸಾಧುನವರ, ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬಸವರಾಜ ಬಾಳೇಕುಂದರಗಿ, ವಕೀಲ ಗಂಗಾಧರ ವಾಲಿ,  ಬೊಮ್ಮನಾಯ್ಕ ಪಾಟೀಲ ಹಾಗೂ ಹಲವಾರು ಗಣ್ಯರು ಪಾಲ್ಗೊಂಡಿದ್ದರು. ಸಂಜಯ ಮಹಾಲೆ ನಿರೂಪಿಸಿದರು. ವಿಜಯ ಮೆಟಗುಡ್ಡ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.