ADVERTISEMENT

ಸುವರ್ಣ ವಿಧಾನಸೌಧ ನಾಮಕರಣ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 8:30 IST
Last Updated 12 ಅಕ್ಟೋಬರ್ 2012, 8:30 IST

ಬೆಳಗಾವಿ: ಬೆಳಗಾವಿಯ ಸುವರ್ಣಸೌಧಕ್ಕೆ ಸುವರ್ಣ ವಿಧಾನಸೌಧ ಎಂದು ಹೆಸರನ್ನಿಡುವ ಬಗ್ಗೆ ಬುಧವಾರ ಮಧ್ಯರಾತ್ರಿ ತೀರ್ಮಾನವಾಯಿತು.

`ಸುವರ್ಣಸೌಧ ಕಟ್ಟಡಕ್ಕೆ ಸುವರ್ಣ ವಿಧಾನಸೌಧ ಎಂದು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು. ಆದರೆ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಸುವರ್ಣ ವಿಧಾನಸೌಧ ಎಂಬ  ಬ್ಯಾನರ್ ಹಾಕಲಾಗುವುದು~ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ ಬುಧವಾರ ಹೇಳಿದ್ದರು.

ಆದರೆ ರಾತ್ರೋರಾತ್ರಿ ಹೆಸರನ್ನು ಬದಲಾಯಿಸಿದ್ದು, ಸುವರ್ಣ ವಿಧಾನಸೌಧ ಎಂದು ಎಲ್ಲ ಕಡೆಗಳಲ್ಲೂ ಬರೆಯಲಾಗಿದೆ. ಸುವರ್ಣ ವಿಧಾನಸೌಧ ಕಟ್ಟಡದ ಎದುರು ಹೆಸರು ಬದಲಾಗಿದ್ದುದರ ಭವ್ಯವಾದ ಬ್ಯಾನರ್ ಹಾಕ ಲಾಗಿದ್ದು, ನಂತರದ ದಿನಗಳಲ್ಲಿ ಕಟ್ಟಡದ ಮೇಲೆ ಹೆಸರನ್ನು ಕೆತ್ತನೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಉದ್ಘಾಟನಾ ಫಲಕದಲ್ಲಿ ಮೊದಲು ಸುವರ್ಣಸೌಧ ಎಂದು ನಮೂದಿಸಲಾಗಿತ್ತು. ರಾತ್ರಿ 2 ಗಂಟೆಯ ಹೊತ್ತಿಗೆ ಫಲಕ ಬದಲಾಯಿಸಿದ್ದು, ಸುವರ್ಣ ವಿಧಾನಸೌಧ ಎಂದು ಬರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.