ADVERTISEMENT

‘ರಾಜಕೀಯ ತಂತ್ರಗಾರಿಕೆ ವಿರೋಧಿಸಿ’

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 8:42 IST
Last Updated 16 ಸೆಪ್ಟೆಂಬರ್ 2013, 8:42 IST
ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ  ಪ್ರೊ. ಡಿ.ಎಸ್.ಚೌಗಲೆ, ಚಂದ್ರಕಾಂತ ಕುಸನೂರ, ಅಶೋಕ ಶಿಂಗೆ ಅವರನ್ನು ಸತ್ಕರಿಸಲಾಯಿತು. ರಾಜಪ್ಪ ದಳವಾಯಿ, ಡಾ. ಸಿದ್ಧರಾಮ ಸ್ವಾಮೀಜಿ, ಸರಜೂ ಕಾಟ್ಕರ್‌, ಯ.ರು.ಪಾಟೀಲ, ಪ್ರೊ. ಬಿ.ಎಸ್‌.ಗವಿಮಠ ಚಿತ್ರದಲ್ಲಿದ್ದಾರೆ.
ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪ್ರೊ. ಡಿ.ಎಸ್.ಚೌಗಲೆ, ಚಂದ್ರಕಾಂತ ಕುಸನೂರ, ಅಶೋಕ ಶಿಂಗೆ ಅವರನ್ನು ಸತ್ಕರಿಸಲಾಯಿತು. ರಾಜಪ್ಪ ದಳವಾಯಿ, ಡಾ. ಸಿದ್ಧರಾಮ ಸ್ವಾಮೀಜಿ, ಸರಜೂ ಕಾಟ್ಕರ್‌, ಯ.ರು.ಪಾಟೀಲ, ಪ್ರೊ. ಬಿ.ಎಸ್‌.ಗವಿಮಠ ಚಿತ್ರದಲ್ಲಿದ್ದಾರೆ.   

ಬೆಳಗಾವಿ: ‘ಸ್ವಾರ್ಥ, ರಾಜಕೀಯ ಹಾಗೂ ತಂತ್ರಗಾರಿಕೆಗಳನ್ನು ವಿರೋಧಿ ಸಬೇಕು. ಇಂತಹ ಸಂಸ್ಕೃತಿಯು ನಿರಂತರ ವಾಗಿ ಬೆಳೆದಾಗ ಸ್ವಾತಂತ್ರ್ಯ ರೂಪಿತ ಗೊಳ್ಳುತ್ತದೆ’ ಎಂದು ಸಾಹಿತಿ ಚಂದ್ರಕಾಂತ ಕುಸನೂರ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಕರ್ನಾಟಕ ರಂಗಭೂಮಿ ಸಂಘದ ಆಶ್ರ ಯದಲ್ಲಿ ಇಲ್ಲಿನ ಕನ್ನಡ ಸಾಹಿತ್ಯ ಭವನ ದಲ್ಲಿ ಹಮ್ಮಿಕೊಂಡಿದ್ದ ರಂಗಕರ್ಮಿಗಳ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ನಾಗನೂರು ರುದ್ರಾಕ್ಷಿಮಠದ ಡಾ. ಸಿದ್ಧರಾಮ ಸ್ವಾಮೀಜಿ, ಸಾಹಿತ್ಯ ಕ್ಷೇತ್ರದ ಬಗ್ಗೆ ರಾಜ ಕಾರಣಿಗಳಿಗೆ ಜ್ಞಾನದ ಕೊರತೆ ಇರುವು ದರಿಂದ ಸಾಹಿತ್ಯ ಕ್ಷೇತ್ರಕ್ಕೆ ಹಿನ್ನಡೆ ಯಾಗುತ್ತಿದೆ. ಪ್ರಾದೇಶಿಕ ಅಸಮಾನತೆ ಹೋಗಲಾಡಿಸುವ ನಿಟ್ಟಿನಲ್ಲಿ ಸರ್ಕಾರ ಬೆಳಗಾವಿ ಜಿಲ್ಲೆಗೆ ಹೆಚ್ಚಿನ ಸಾಹಿತ್ಯಿಕ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಪ್ರೊ. ಬಿ.ಎಸ್.ಗವಿಮಠ, ಮಹಾ ರಾಷ್ಟ್ರ ರಾಜ್ಯದ ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲಿಯೂ ಸಾಂಸ್ಕೃತಿಕ ನೀತಿ ಜಾರಿಗೆ ಬರಬೇಕು. ಸರ್ಕಾರವು ಬಜೆಟ್‌ ನಲ್ಲಿ ಸಂಸ್ಕೃತಿಯ ಅಭಿ ವೃದ್ಧಿಗಾಗಿ ವಿಶೇಷ ಅನುದಾನ ಮೀಸಲಿಡಬೇಕು. ಈ ಮೂಲಕ ಸಂಸ್ಕೃತಿಯನ್ನು ಬಲಿಷ್ಠಗೊಳಿಸ ಬೇಕು ಎಂದು ಮನವಿ ಮಾಡಿದರು.

ಪತ್ರಕರ್ತ ಸರಜೂ ಕಾಟ್ಕರ್ ಮಾತ ನಾಡಿ, ಸರ್ಕಾರವು ರಂಗಭೂಮಿಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಶೀಘ್ರ ದಲ್ಲಿ ನಗರದಲ್ಲಿ ರಂಗಾಯಣ ಚಟು ವಟಿಕೆ ಆರಂಭವಾಗಬೇಕು ಎಂದು ಅಭಿಪ್ರಾಯಪಟ್ಟರು.

ರಂಗಕರ್ಮಿಗಳಾದ ಚಂದ್ರಕಾತ ಕುಸ ನೂರ, ಪ್ರೊ. ಡಿ.ಎಸ್.ಚೌಗಲೆ ಹಾಗೂ ಅಶೋಕ ಶಿಂಗೆ ಅವರನ್ನು ಸತ್ಕರಿಸಲಾ ಯಿತು. ಕೇಂದ್ರ ಕಸಾಪ ಕಾರ್ಯದರ್ಶಿ ಸಂಗಮೇಶ ಬಾದ ವಾಡಗಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಯ.ರು. ಪಾಟೀಲ, ರಾಜಪ್ಪ ದಳವಾಯಿ, ಶಿರೀಷ ಜೋಶಿ, ಡಾ. ಬಸವರಾಜ ಜಗಜಂಪಿ, ರವಿ ಕೋಟಾರಗಸ್ತಿ, ಎಫ್.ವಿ.ಮಾನ್ವಿ ಉಪಸ್ಥಿತರಿದ್ದರು. ಸುಭಾಸ ಏಣಗಿ ನಿರೂಪಿಸಿದರು. ಬಸವರಾಜ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.