ADVERTISEMENT

‘ಶುದ್ಧ ಕುಡಿಯುವ ನೀರು ಪೂರೈಕೆ ಶೀಘ್ರ’

ಜಾಕ್‌ವೆಲ್‌ ಕಾಮಗಾರಿಗೆ ಗ್ರಾಮಸ್ಥರ ವಿರೋಧ: ಶಾಸಕರ ಜೊತೆ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 6:15 IST
Last Updated 17 ಸೆಪ್ಟೆಂಬರ್ 2013, 6:15 IST

ರಾಯಬಾಗ: ರಾಜೀವ್‌ ಗಾಂಧಿ ಗ್ರಾಮೀಣ ನೀರು ಸರಬರಾಜ ಬಹು ಗ್ರಾಮ ಯೋಜನೆಯನ್ವಯ ತಾಲ್ಲೂಕಿನ 14 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಯೋಜನೆ ಮಂಜೂರಾಗಿ ಟೆಂಡರ್‌ ಪ್ರಕ್ರಿಯೆ ಮುಗಿದಿದೆ ಎಂದು ಶಾಸಕ ದುರ್ಯೋಧನ ಐಹೊಳೆ ತಿಳಿಸಿದರು.
ಸದರಿ ಕಾಮಗಾರಿ ದಿಗ್ಗೆವಾಡಿ ಬಳಿ ಕೃಷ್ಣಾ ನದಿಯಿಂದ ಮಾವಿಹೊಂಡಾವರೆಗೆ ಪೈಪ್ ಲೈನ್‌ ಮೂಲಕ ಹೋಗಲಿದೆ ಎಂದರು.

ಈ ಕುಡಿಯುವ ನೀರಿನ ಯೋಜನೆಗೆ ಸೋಮವಾರ ದಿಗ್ಗೆವಾಡಿ ಬಳಿ ಕೃಷ್ಣಾ ನದಿಗೆ ಜಾಕ್‌ವೆಲ್‌ ಕಾಮಗಾರಿಗೆ ಚಾಲನೆ ನೀಡಲು ತೆರಳಿದಾಗ ಗ್ರಾಮ ಸ್ಥರು ಕಾಮಗಾರಿಗೆ ವಿರೋಧ ವ್ಯಕ್ತ ಪಡಿಸಿ ಶಾಸಕರೊಂದಿಗೆ ವಾಗ್ವಾದಕೆ್ಕ ಇಳಿದರು.

ಶಾಸಕರು ಗ್ರಾಮಸ್ಥರ ಬೇಡಿಕೆಗಳನ್ನು ಪೂರೈಸುವ ಭರವಸೆ ನೀಡಿದರು ಸಹ ಗ್ರಾಮಸ್ಥರು ಒಪ್ಪಲಿಲ್ಲ. ನಾವು ಈ ಜಾಗದಲ್ಲಿ ಜಾಕ್‌ವೆಲ್‌ ಮಾಡಲು ಬಿಡುವದಿಲ್ಲ ಎಂದು ಹಠ ಹಿಡಿದರು.

ಜಾಕ್‌ವೆಲ್‌ ಮಾಡಬೇಕಾದರೆ ಪ್ರವಾಹ ಬಂದಾಗ ನದಿ ಕೊರೆಯುವ ಸ್ಥಳವನ್ನು ತುಂಬಿಕೊಡಬೇಕಲ್ಲದೆ ರಸ್ತೆ ಮೇಲೆ ಅಗಿಯಲು ಬಿಡುವುದಿಲ್ಲ   ಎಂದರು.

ಹೀಗಾಗಿ ಶಾಸಕರು ಕಾಮಗಾರಿಗೆ ಚಾಲನೆ ನೀಡದೆ ವಾಪಸ್‌ ಬಂದ ಘಟನೆ ಜರುಗಿದೆ. ಗ್ರಾಮಸ್ಥರು ವಾಗ್ವಾದ ಮಾಡಿದರು ಹೊರತಾಗಿ ಘೇರಾವ್ ಹಾಕಲಿಲ್ಲ. ತಮ್ಮ   ಸಮಸ್ಯೆಗಳನ್ನು ಆಲಿಸಿರಿ ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ಪ್ರತಿಕ್ರಿಯೆ: ಈ ಕಾಮ ಗಾರಿ ಬಗ್ಗೆ ಕಾಂಗ್ರೆಸ್ ಕಾರ್ಯರ್ತರನು್ನ ಕೇಳಿದಾಗ ಇದು `14 ಕೋಟಿ ಬಹು ದೊಡ್ಡ ಕಾಮಗಾರಿಯಾದ್ದರಿಂದ ಗ್ರಾಮದ ಮುಖಂಡರನ್ನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಆಹ್ವಾ­ನಿಸಬೇಕಿತ್ತು. ಕಾಮಗಾರಿಗೆ ನಮ್ಮ ದೇನೂ  ತಕರಾರು ಇಲ್ಲ. ಹಿಂದೆಯೂ ಸಹ ಜಾಕ್‌ವೆಲ್‌ ಮಾಡುವಾಗ ಇದೇ ರೀತಿ ಸಮಸ್ಯೆಯಾಗಿತು್ತ ಎಂದು ತಿಳಿಸಿದರು.
ಇನ್ನಾದರೂ ರಾಜಕಿಯ ರಹಿತವಾಗಿ ಎಲ್ಲರನ್ನು ವಿಶ್ವಾಸಕೆ್ಕ ತೆಗೆದುಕೊಂಡು ಕೆಲಸ ಮಾಡುವಂತೆ ಗಮನ ಹರಿಸಲಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.