ADVERTISEMENT

18 ಲಕ್ಷ ಅವ್ಯವಹಾರ: ಅಧಿಕಾರಿಗಳ ಅಮಾನತು

ಬೆಳಗಾವಿ ವಿಧಾನಮಂಡಲ ಅಧಿವೇಶನ–2013

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 8:44 IST
Last Updated 5 ಡಿಸೆಂಬರ್ 2013, 8:44 IST

ಸುವರ್ಣಸೌಧ (ಬೆಳಗಾವಿ): ರಾಯಬಾಗ ತಹಸೀಲ್ದಾರ್ ಕಚೇರಿ ಯಲ್ಲಿ ನಕಲಿ ಚಲನ್ ಸೃಷ್ಟಿಸಿ ₨ ೧೮ ಲಕ್ಷ ಅವ್ಯವಹಾರ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಕೆಲವು ಅಧಿಕಾರಿಗಳನ್ನು ಅಮಾನತು ಮಾಡ ಲಾಗಿದೆ ಎಂದು ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ ಬುಧವಾರ ವಿಧಾನಸಭೆಯಲ್ಲಿ ತಿಳಿಸಿದರು.


ಐಹೊಳೆ ಡಿ.ಮಹಾಲಿಂಗಪ್ಪ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ಶಿರಸ್ತೆದಾರ ಎ.ಟಿ.ಪಾಟೀಲ, ಕುಡಚಿ ಆಹಾರ ಶಿರಸ್ತೆದಾರ ಎನ್.ಬಿ.ಗೆಜ್ಜಿ, ಕಂದಾಯ ನಿರೀಕ್ಷಕರಾದ ಡಿ.ಬಿ.ಮಣ್ಣೂರ, ಎ.ಎಸ್.ಪಾಂಡ್ರೆ ಅವರನ್ನು ಅಮಾನತು ಗೊಳಿಸಲಾಗಿದೆ.

ಉಪ ವಿಭಾಗಾಧಿಕಾರಿಗಳ ನೇತೃತ್ವದ ತನಿಖಾ ತಂಡ ಅವ್ಯವಹಾರಕ್ಕೆ ಸಂಬಂಧ ಪಟ್ಟಂತೆ ದಾಖಲೆಗಳನ್ನು ಪರಿಶೀಲಿಸು ತ್ತಿದ್ದು, ವರದಿ ಬಂದ ನಂತರ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಪ್ರಕರಣ ಕ್ರಿಮಿನಲ್ ಹಾಗೂ ವಂಚನೆ ಸ್ವರೂಪದ್ದಾಗಿದೆ. ಇದರಲ್ಲಿ ಅಧಿಕಾರಿಗಳು, ಸಿಬ್ಬಂದಿ, ಮಧ್ಯವರ್ತಿ ಗಳು ಭಾಗಿಯಾಗಿರುವ ಕುರಿತು ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗು ವುದು. ನಕಲಿ ಚಲನ್ ಗಳನ್ನು ಭೌತಿಕ ವಾಗಿ ಪರಿಶೀಲನೆ ನಡೆಸಿದ್ದು, ೧೮೨೧ ನಕಲಿ ಚಲನ್ ದೊರಕಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.