ADVERTISEMENT

27 ಕೆ.ಜಿ. ಗಾಂಜಾ ವಶ, 13 ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 16:07 IST
Last Updated 25 ಸೆಪ್ಟೆಂಬರ್ 2020, 16:07 IST
ಬೆಳಗಾವಿಯಲ್ಲಿ ಸಿಸಿಐಬಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಅವರಿಂದ ₹ 2.50  ಲಕ್ಷ ಮೌಲ್ಯದ 15 ಕೆ.ಜಿ. 500 ಗಾಂಜಾ ವಶಕ್ಕೆ ಪಡೆದಿದ್ದಾರೆ
ಬೆಳಗಾವಿಯಲ್ಲಿ ಸಿಸಿಐಬಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಅವರಿಂದ ₹ 2.50  ಲಕ್ಷ ಮೌಲ್ಯದ 15 ಕೆ.ಜಿ. 500 ಗಾಂಜಾ ವಶಕ್ಕೆ ಪಡೆದಿದ್ದಾರೆ   

ಬೆಳಗಾವಿ: ನಗರ ಪೊಲೀಸರು ಇಲ್ಲಿ ಪ್ರತ್ಯೇಕವಾಗಿ ಮೂರು ದಾಳಿ ನಡೆಸಿ ಒಟ್ಟು 27 ಕೆ.ಜಿ. ಗಾಂಜಾ ವಶಪಡಿಸಿಕೊಂಡು, 13 ಮಂದಿ ಆರೋಪಿಗಳನ್ನು ಶುಕ್ರವಾರ ಬಂಧಿಸಿದ್ದಾರೆ.

ಸಿಸಿಐಬಿ, ಮಾಳಮಾರುತಿ ಹಾಗೂ ಎಪಿಎಂಸಿ ಠಾಣೆ ಪೊಲೀಸರು ಗಾಂಜಾ ಮಾರಾಟಗಾರರ ಅಡ್ಡೆ ಮೇಲೆ ದಾಳಿ ನಡೆಸಿದ್ದಾರೆ. 11 ಮೊಬೈಲ್‌ ಫೋನ್‌ಗಳು, 1 ಕಾರ್, 3 ದ್ವಿಚಕ್ರವಾಹನ ಹಾಗೂ ₹ 15ಸಾವಿರ ವಶಕ್ಕೆ ಪಡೆಯಲಾಗಿದೆ ಎಂದು ಡಿಸಿಪಿ ವಿಕ್ರಮ್ ಅಮಟೆ ತಿಳಿಸಿದ್ದಾರೆ.

‘ಕಾರ್ಯಾಚರಣೆ ಮುಂದುವರಿಯಲಿದೆ. ಸಾರ್ವಜನಿಕರು ಮಾಹಿತಿ ನೀಡಿ ಸಹಕರಿಸಬೇಕು’ ಎಂದು ಕೋರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.