ADVERTISEMENT

ಸಾರಿಗೆ ಇಲಾಖೆಗೆ ₹ 3ಸಾವಿರ ಕೋಟಿ ನಷ್ಟ: ಸವದಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 15:19 IST
Last Updated 14 ಅಕ್ಟೋಬರ್ 2020, 15:19 IST

ಬೆಳಗಾವಿ: ‘ಕೊರೊನಾ ಹಾಗೂ ಲಾಕ್‌ಡೌನ್‌ ಕಾರಣದಿಂದ ಬಸ್‌ಗಳ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರಿಂದ ಸಾರಿಗೆ ಇಲಾಖೆಯು ₹ 3ಸಾವಿರ ಕೋಟಿಗೂ ಅಧಿಕ ನಷ್ಟ ಅನುಭವಿಸಿದೆ. ಈಗಲೂ ಪರಿಸ್ಥಿತಿ ಸಂಪೂರ್ಣ ಚೇತಕರಿಸಿಕೊಂಡಿಲ್ಲ’ ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.

ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಇಲಾಖೆಯಲ್ಲಿ 1.30 ಲಕಷ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ ಬರುತ್ತಿರುವ ಆದಾಯ ಬಸ್‌ಗಳ ಡಿಸೇಲ್‌ಗೆ‌ ಮಾತ್ರವೇ ಸಾಕಾಗುತ್ತಿದೆ. ಆದಾಯ ಇಲ್ಲವೆಂದು ಬಸ್‌ಗಳ ಕಾರ್ಯಾಚರಣೆ ನಿಲ್ಲಿಸಲಾಗುವುದಿಲ್ಲ. ಸಿಬ್ಬಂದಿಗೆ 8–10 ದಿನ ತಡವಾಗಿ ವೇತನ ಕೊಡಲಾಗುತ್ತಿದೆ. ಆದರೆ, ಕಡಿತಗೊಳಿಸಿಲ್ಲ’ ಎಂದು ಹೇಳಿದರು.

‘ಕೋವಿಡ್–19ನಿಂದ ಇಲಾಖೆಯ 50 ಮಂದಿ ಮೃತರಾಗಿದ್ದಾರೆ. ತಲಾ ₹ 30 ಲಕ್ಷ ಪರಿಹಾರ ನೀಡುವಂತೆ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಹಣಕಾಸಿನ ತೊಂದರೆಯಿಂದಾಗಿ ಪರಿಹಾರ ವಿತರಣೆ ವಿಳಂಬವಾಗಿದೆ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

‘ಆದಾಯದಲ್ಲಿ ಕೊರತೆ ಆಗಿರುವುದರಿಂದ ನೆರೆ ಸಂತ್ರಸ್ತರಿಗೆ ತಕ್ಷಣ ಪರಿಹಾರ ಕೊಡಲು ಕಷ್ಟವಾಗಿದೆ. ಪರಿಸ್ಥಿತಿಯು ಮುಖ್ಯಮಂತ್ರಿ ಕೈಕಟ್ಟಿ ಹಾಕಿದೆ. ಕೊರೊನಾದಿಂದ ಆರ್ಥಿಕ ವ್ಯವಸ್ಥೆ ಮೇಲೆ ಬಹಳಷ್ಟು ದುಷ್ಪರಿಣಾಮ ಬೀರಿದೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ ₹ 33 ಸಾವಿರ ಕೋಟಿ ಸಾಲ ನೀಡಲಿದೆ. ಆ ಹಣ ಬಂದರೆ ಎಲ್ಲ ವ್ಯವಸ್ಥೆಗಳೂ ಸುಗಮವಾಗಲಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.