ADVERTISEMENT

ಮಂಜುನಾಥ ಸೊಸೈಟಿಗೆ ₹43.41 ಲಕ್ಷ ಲಾಭ

ಸೊಸೈಟಿ ಅಧ್ಯಕ್ಷ ಸಂಗಪ್ಪ ನಿಡಗುಂದಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2023, 15:36 IST
Last Updated 10 ನವೆಂಬರ್ 2023, 15:36 IST
ಮೂಡಲಗಿಯ ಮಂಜುನಾಥ ಅರ್ಬನ್‌ ಕೋ.ಆಪ್‌ ಕ್ರೆಡಿಟ್‌ ಸೊಸೈಟಿಯ 15ನೇ ವಾರ್ಷಿಕೋತ್ಸವ ಸಮಾರಂಭ ನಡೆಯಿತು.  ಸೊಸೈಟಿ ಅಧ್ಯಕ್ಷ ಸಂಗಪ್ಪ ನಿಡಗುಂದಿ, ಉಪಾಧ್ಯಕ್ಷ ಶಿವಬಸು ಕುಡಚಿ ಇದ್ದಾರೆ
ಮೂಡಲಗಿಯ ಮಂಜುನಾಥ ಅರ್ಬನ್‌ ಕೋ.ಆಪ್‌ ಕ್ರೆಡಿಟ್‌ ಸೊಸೈಟಿಯ 15ನೇ ವಾರ್ಷಿಕೋತ್ಸವ ಸಮಾರಂಭ ನಡೆಯಿತು.  ಸೊಸೈಟಿ ಅಧ್ಯಕ್ಷ ಸಂಗಪ್ಪ ನಿಡಗುಂದಿ, ಉಪಾಧ್ಯಕ್ಷ ಶಿವಬಸು ಕುಡಚಿ ಇದ್ದಾರೆ   

ಮೂಡಲಗಿ: ‘ಮಂಜುನಾಥ ಅರ್ಬನ್‌ ಕೋ.ಆಪ್‌ ಕ್ರೆಡಿಟ್‌ ಸೊಸೈಟಿಯು ಷೇರುದಾರರಿಗೆ ಪ್ರಸಕ್ತ ಸಾಲಿನಿಂದ ಶೇ 12ರಷ್ಟು ಲಾಭಾಂಶ ವಿತರಿಸಲಾಗುವುದು’ ಎಂದು ಸೊಸೈಟಿ ಅಧ್ಯಕ್ಷ ಸಂಗಪ್ಪ ನಿಡಗುಂದಿ ಹೇಳಿದರು.

ಇಲ್ಲಿಯ ಮಂಜುನಾಥ ಅರ್ಬನ್‌ ಕೋ ಆಪ್‌ ಕ್ರೆಡಿಟ್‌ ಸೊಸೈಟಿಯಲ್ಲಿ ಆಚರಿಸಿದ 15ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಸೊಸೈಟಿಗೆ ನಿವೇಶನವನ್ನು ಖರೀದಿಸಿದ್ದು ಸುಸಜ್ಜಿತ ಕಟ್ಟಡವನ್ನು ನಿರ್ಮಿಸಲಾಗುವುದು’ ಎಂದರು.

ಪ್ರಸಕ್ತ ಆರ್ಥಿಕ ವರ್ಷದ ಕೊನೆಯಲ್ಲಿ ₹43.41 ಲಕ್ಷ ಲಾಭ ಗಳಿಸಿ ಪ್ರಗತಿಯತ್ತ ಸಾಗುತ್ತಿದೆ. ಷೇರು ಬಂಡವಾಳ ₹62.63 ಲಕ್ಷ, ಠೇವುಗಳು ₹24.35 ಕೋಟಿ, ಸಾಲ ವಿತರಣೆ ₹18.79 ಕೋಟಿ, ನಿಧಿಗಳು ₹1.34 ಕೋಟಿ ಹಾಗೂ ದುಡಿಯುವ ಬಂಡವಾಳವು ₹27.04 ಕೋಟಿ ಹೊಂದಿದೆ ಎಂದರು.

ADVERTISEMENT

ಸೊಸೈಟಿ ಉಪಾಧ್ಯಕ್ಷ ಶಿವಬಸು ಕುಡಚಿ ಮಾತನಾಡಿ, ಸೊಸೈಟಿಯು 4 ಶಾಖೆಗಳನ್ನು ಹೊಂದಿದ್ದು ಎಲ್ಲ ಶಾಖೆಗಳನ್ನು ಪ್ರಗತಿಯಲ್ಲಿ ಸಾಗಿವೆ. ಸೊಸೈಟಿಯ ಎಲ್ಲ ಸದಸ್ಯರ ಸಹಕಾರ ಮತ್ತು ಸಿಬ್ಬಂದಿ ಕಾರ್ಯದಕ್ಷತೆಯಿಂದ ಸೊಸೈಟಿಯು ಸಹಕಾರಿ ಕ್ಷೇತ್ರದಲ್ಲಿ ಉತ್ತಮವಾಗಿ ಬೆಳೆಯುತ್ತಲಿದೆ ಎಂದು ಹೇಳಿದರು.

ಸೊಸೈಟಿಯ ನಿರ್ದೇಶಕರಾದ ರುದ್ರಪ್ಪ ಬಳಿಗಾರ, ಶಿವಬಸು ಸುಣಧೋಳಿ, ಶಿವಬೋಧ ಉದಗಟ್ಟಿ, ಪಾಂಡುರಂಗ ಮಹೇಂದ್ರಕರ, ಪ್ರಶಾಂತ ನಿಡಗುಂದಿ, ಶಿವಪ್ಪ ಭುಜನ್ನವರ, ಮಹಾದೇವ ಗೋಕಾಕ, ಶೈಲಜಿ ನಾರಾಯಣಕರ, ಲಕ್ಷ್ಮಿ ಶಿವಾಪುರ, ರಶ್ಮಿ ಸಸಾಲಟ್ಟಿ, ಶೇರುದಾರು ಮತ್ತು ಶಾಖೆಗಳ ಸಲಹಾ ಸಮಿತಿ ಸದಸ್ಯರು ಇದ್ದರು.

ಪ್ರಧಾನ ಕಾರ್ಯದರ್ಶಿ ಬಸವರಾಜ ಕುದರಿ ಸ್ವಾಗತಿಸಿದರು, ಸಹಕಾರ್ಯದರ್ಶಿ ಮಲ್ಲಿಕಾರ್ಜುನ ಹಂದಿಗುಂದ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.