ADVERTISEMENT

ಗೋವಾ ಸಚಿವ ವಿನೋದ ಪಾಲ್ಯೇಕರ್‌ ಹೇಳಿಕೆ ಖಂಡಿಸಿ ಕಣಕುಂಬಿ ಬಳಿ ರಸ್ತೆತಡೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 13:37 IST
Last Updated 15 ಜನವರಿ 2018, 13:37 IST
ಗೋವಾ ಸಚಿವ ವಿನೋದ ಪಾಲ್ಯೇಕರ್‌ ಹೇಳಿಕೆ ಖಂಡಿಸಿ ಕಣಕುಂಬಿ ಬಳಿ ರಸ್ತೆತಡೆ ಪ್ರತಿಭಟನೆ
ಗೋವಾ ಸಚಿವ ವಿನೋದ ಪಾಲ್ಯೇಕರ್‌ ಹೇಳಿಕೆ ಖಂಡಿಸಿ ಕಣಕುಂಬಿ ಬಳಿ ರಸ್ತೆತಡೆ ಪ್ರತಿಭಟನೆ   

ಬೆಳಗಾವಿ: ಕನ್ನಡಿಗರ ಬಗ್ಗೆ ಅವಮಾನಕಾರಿ ಪದ ಬಳಕೆ ಮಾಡಿರುವ ಗೋವಾ ಜಲಸಂಪನ್ಮೂಲ ಸಚಿವ ವಿನೋದ ಪಾಲ್ಯೇಕರ್‌ ಅವರ ಹೇಳಿಕೆ ಖಂಡಿಸಿ ಖಾನಾಪುರ ತಾಲ್ಲೂಕಿನ ಕಣಕುಂಬಿ ಬಳಿ ಕರವೇ, ಜಯಕರ್ನಾಟಕ ಸಂಘಟನೆಗಳ ಕಾರ್ಯಕರ್ತರು ಸೋಮವಾರ ರಸ್ತೆತಡೆ ಮಾಡಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರು ಗೋವಾ ಹಾಗೂ ಕರ್ನಾಟಕದ ನಡುವೆ ಸಂಚರಿಸುವ ವಾಹನಗಳಿಗೆ ತಡೆಯೊಡ್ಡಿದರು. ಸಚಿವರ ಪ್ರತಿಕೃತಿ ಹಾಗೂ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಮಹದಾಯಿ ನೀರು ಬಿಟ್ಟರೆ ಶಾಂತಿ. ಇಲ್ಲವಾದರೆ ಕ್ರಾಂತಿ ಎಂದು ಘೋಷಣೆ ಕೂಗುತ್ತಾ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

ADVERTISEMENT

‘ಕರ್ನಾಟಕದವರು ಹರಾಮಿಗಳು; ಅವರು ಏನನ್ನಾದರೂ ಮಾಡಬಲ್ಲರು’ ಎಂದು ಗೋವಾದ ಜಲ ಸಂಪನ್ಮೂಲ ಸಚಿವ ವಿನೋದ ಪಾಲ್ಯೇಕರ್‌ ಭಾನುವಾರ ಪಣಜಿಯಲ್ಲಿ ಹೇಳಿಕೆ ನೀಡಿದ್ದರು. ಇದಾದ ತುಸು ಹೊತ್ತಿನಲ್ಲೇ ಆ ಮಾತನ್ನು ಹಿಂಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.