ADVERTISEMENT

‘ಜನಪರ ಬಜೆಟ್‌’

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 6:27 IST
Last Updated 3 ಫೆಬ್ರುವರಿ 2018, 6:27 IST

ಗೋಕಾಕ: ಕೇಂದ್ರ ಹಣಕಾಸು ಸಚಿವ ಅರುಣ ಜೇಟ್ಲಿಯವರು ಮಂಡಿಸಿರುವ ಪ್ರಸಕ್ತ ಸಾಲಿನ ಆಯವ್ಯಯವು ರೈತ ಸಮುದಾಯದ ಹಿತಾಸಕ್ತಿಯನ್ನು ಕಾಯುವ ಮತ್ತು ಸಮಾಜದ ಬಹುತೇಕ ವರ್ಗಗಳ ಜನಾಂಗಗಳ ಬಯಕೆಗೆ ಪೂರಕವಾದ ಸ್ವಾಗತಾರ್ಹ ಬಜೆಟ್ ಆಗಿದೆ ಎಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ಹೇಳಿದ್ದಾರೆ.

ಕೇಂದ್ರ ಸರ್ಕಾರ ಪ್ರಥಮ ಬಾರಿಗೆ ಕೃಷಿ ಚಟುವಟಿಕೆಗಳಿಗೆ ಪೂರಕವಾದ ಬಜೆಟ್‌ ಮಂಡಿಸಿದ್ದು, ಕೃಷಿಕರ ಎಲ್ಲ ಬೇಡಿಕೆಗಳಿಗೆ ಸ್ಪಂದಿಸುವ ವಿಚಾರ ಧಾರೆಗಳೊಂದಿಗೆ ಬಜೆಟ್‌ನಲ್ಲಿ ಕ್ರಮ ಕೈಕೊಳ್ಳಲಾಗಿದೆ.

ಜನಸಾಮಾನ್ಯರ ಆರೋಗ್ಯದ ಕಡೆಗೆ ತೀವ್ರ ಗಮನ ಹರಿಸಿರುವ ವಿತ್ತ ಸಚಿವರು ಪ್ರತಿ ಕುಟುಂಬದ ಆರೋಗ್ಯ ರಕ್ಷಣೆಗೆ ₹ 5 ಲಕ್ಷ ಧನ ಸಹಾಯ ಮಾಡುವ ಕೇಂದ್ರದ ಧೋರಣೆ ಅತ್ಯಂತ ಕ್ರಾಂತಿಕಾರಕ ಹೆಜ್ಜೆಯಾಗಿದ್ದು, ಜನಸಾಮಾನ್ಯರ ಆರೋಗ್ಯ ರಕ್ಷಣೆಯತ್ತ ಇಟ್ಟಿರುವ ದಿಟ್ಟ ಹೆಜ್ಜೆ ಇದು ಎಂದು ಅವರು ಶ್ಲಾಘಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.