ADVERTISEMENT

ರಾಮದುರ್ಗ ಲಯನ್ಸ್‌ ಸಂಸ್ಥೆಗೆ 9 ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2023, 14:36 IST
Last Updated 12 ಆಗಸ್ಟ್ 2023, 14:36 IST
ಹುಬ್ಬಳ್ಳಿಯಲ್ಲಿ ಜರುಗಿದ ಸಮಾರಂಭದಲ್ಲಿ ರಾಮದುರ್ಗದ ಲಯನ್ಸ್‌ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ವೆಂಕಟೇಶ ಹಿರೇರಡ್ಡಿ ಅವರಿಗೆ ಜಿಲ್ಲಾ ಗವರ್ನರ್‌ ಸುಗ್ಗಲಾ ಎಲಮಲಿ ಪ್ರಶಸ್ತಿ ನೀಡಿದರು
ಹುಬ್ಬಳ್ಳಿಯಲ್ಲಿ ಜರುಗಿದ ಸಮಾರಂಭದಲ್ಲಿ ರಾಮದುರ್ಗದ ಲಯನ್ಸ್‌ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ವೆಂಕಟೇಶ ಹಿರೇರಡ್ಡಿ ಅವರಿಗೆ ಜಿಲ್ಲಾ ಗವರ್ನರ್‌ ಸುಗ್ಗಲಾ ಎಲಮಲಿ ಪ್ರಶಸ್ತಿ ನೀಡಿದರು   

ರಾಮದುರ್ಗ: ಸ್ಥಳೀಯ ಲಯನ್ಸ್ ಸಂಸ್ಥೆ 2022-23ನೇ ಸಾಲಿನಲ್ಲಿ ಕೈಗೊಂಡ ಸಾಮಾಜಿಕ ಕಾರ್ಯಗಳನ್ನು ಗಮನಿಸಿ ಜಿಲ್ಲಾ ಲಯನ್ಸ್ ಸಂಸ್ಥೆಯಿಂದ ಮೂರು ಪ್ರಶಸ್ತಿ ಮತ್ತು ಪದಾಧಿಕಾರಿಗಳ ಕಾರ್ಯಗಳಿಗೆ 6 ಪ್ರಶಸ್ತಿ ಸೇರಿ ಒಟ್ಟು 9 ಪ್ರಶಸ್ತಿ ಲಭಿಸಿವೆ.

ಹುಬ್ಬಳ್ಳಿಯಲ್ಲಿ ನಡೆದ ಸಮಾರಂಭದಲ್ಲಿ ನಿಕಟಪೂರ್ವ ಅಧ್ಯಕ್ಷ ವೆಂಕಟೇಶ ಹಿರೇರಡ್ಡಿ ಅವರಿಗೆ ಲಯನ್ಸ್ ಜಿಲ್ಲಾ ಗವರ್ನರ್ ಸುಗ್ಗಲಾ ಎಳಮಲಿ ಅವರು ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು.

ಲಯನ್ಸ್ ಟ್ರಸ್ಟ್ ಅಧ್ಯಕ್ಷ ಬಾಬಣ್ಣ ಪತ್ತೇಪೂರ, ಅಪ್ಪು ದಿಂಡಿವಾರ, ಗೋಪಾಲ ಬಿಂದಗಿ, ಬಿ.ಎಲ್.ಸಂಕನಗೌಡ್ರ, ಎಂ.ಎಸ್. ಸಂಕನಗೌಡ್ರ, ಎ.ಜಿ. ಮಳಗಲಿ, ಲಯನ್ಸ್ ಸಂಸ್ಥೆ ಸದಸ್ಯರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.