ADVERTISEMENT

ಎಟಿಎಂ ಕಳವು ಯತ್ನ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 14:45 IST
Last Updated 29 ಸೆಪ್ಟೆಂಬರ್ 2022, 14:45 IST
ಎಟಿಎಂ ಕಳವು ಯತ್ನ: ಆರೋಪಿ ಬಂಧನ
ಎಟಿಎಂ ಕಳವು ಯತ್ನ: ಆರೋಪಿ ಬಂಧನ   

ರಾಯಬಾಗ: ತಾಲ್ಲೂಕಿನ ಬಾವನಸೌದತ್ತಿ ಗ್ರಾಮದಲ್ಲಿ ಎಟಿಎಂ ಒಡೆಯಲು ಯತ್ನಿಸಿದ ಆರೋ‍ಪಿಯನ್ನು ಎಂಟು ತಿಂಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ.

ಬಾವಾನಸೌದತ್ತಿ ನಿವಾಸಿ ಖಾಜಾಸಾಬ್‌ ಬಾಬಾಸಾಬ್‌ ಮುಜಾವರ (25) ಬಂಧಿತ. 2022ರ ಫೆಬ್ರುವರಿ 4ರಂದು ರಾತ್ರಿ ಎಟಿಎಂ ಮುರಿದು ಕಳ್ಳತನಕ್ಕೆ ಯತ್ನಿಸಿದ ಯುವಕ ತಲೆ ಮರೆಸಿಕೊಂಡಿದ್ದ. ಕಬ್ಬಿಣದ ರಾಡ್‌ ಬಳಸಿ ಎಟಿಎಂ ಮುರಿಯಲು ಯತ್ನಿಸಿದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಆದರೆ, ಆರೋಪಿ ಗುರುತು ಸರಿಯಾಗಿ ಪತ್ತೆಯಾಗಿರಲಿಲ್ಲ.

ಪ್ರಕರಣದ ತನಿಖೆ ಕೈಗೊಂಡ ರಾಯಬಾಗ ಪೊಲೀಸರು ಬೆರಳಿನ ಗುರುತುಗಳನ್ನು ಪರೀಕ್ಷಿಸಿ, ಅದರ ಆಧಾರದಲ್ಲಿ ಆರೋಪಿಯನ್ನು ಬಂಧಿಸಿದರು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.