ADVERTISEMENT

ಚಿಕ್ಕೋಡಿ: ಯಮ ಸಲ್ಲೇಖನ ವ್ರತ ಕೈಗೊಂಡ ಮುನಿ

​ಪ್ರಜಾವಾಣಿ ವಾರ್ತೆ
Published 19 ಮೇ 2024, 16:25 IST
Last Updated 19 ಮೇ 2024, 16:25 IST
ಯಮ ಸಲ್ಲೇಖನ ವ್ರತ ಕೈಗೊಂಡ ಸಮಾಧಿ ಸೇನ ಮುನಿಗಳು
ಯಮ ಸಲ್ಲೇಖನ ವ್ರತ ಕೈಗೊಂಡ ಸಮಾಧಿ ಸೇನ ಮುನಿಗಳು   

ಚಿಕ್ಕೋಡಿ(ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಕೋಥಳಿಯ ದೇಶಭೂಷಣ ಮುನಿಗಳ ಜೈನ ಆಶ್ರಮದಲ್ಲಿ ಸಮಾಧಿ ಸೇನ ಮುನಿಗಳು(79) ಮೇ 17ರಿಂದ ನಾಲ್ಕು ಪ್ರಕಾರದ ಆಹಾರ(ಲೇಹ, ಪೇಯ, ಸ್ವಾದ್ಯ ಮತ್ತು ಖಾದ್ಯ) ತ್ಯಾಗ ಮಾಡಿ, ಯಮ ಸಲ್ಲೇಖನ ವ್ರತ ಕೈಗೊಂಡಿದ್ದಾರೆ.

ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ, ಅಥಣಿ ತಾಲ್ಲೂಕು, ಪಕ್ಕದ ಮಹಾರಾಷ್ಟ್ರದ ಕೊಲ್ಹಾಪೂರ ಮತ್ತು ಸಾಂಗ್ಲಿ ಜಿಲ್ಲೆಯಿಂದ ಅಪಾರ ಸಂಖ್ಯೆಯಲ್ಲಿ ಜನರು ಆಶ್ರಮಕ್ಕೆ ಆಗಮಿಸಿ, ಮುನಿಗಳ ದರ್ಶನ ಪಡೆಯುತ್ತಿದ್ದಾರೆ.

ಗದಗ ಜಿಲ್ಲೆಯ ಗಜೇಂದ್ರಗಡದವರಾದ ಸಮಾಧಿ ಸೇನ ಮುನಿಗಳು ಗುಲಾಬ ಭೂಷಣ ಮುನಿಗಳ ಶಿಷ್ಯ. ಸಂಸಾರಿಯಾಗಿದ್ದ ಅವರು, 2004ರಲ್ಲಿ ಮನೆ ತೊರೆದು ತ್ಯಾಗಿಯಾಗಿ ದೀಕ್ಷೆ ಪಡೆದು ಜೈನ ಧರ್ಮದ ಪ್ರಸಾರ ಕಾರ್ಯದಲ್ಲಿ ತೊಡಗಿದರು. 2014ರಲ್ಲಿ ಮಹಾರಾಷ್ಟ್ರದ ಚಿಪರಿ ಆಶ್ರಮದ ಧರ್ಮಸೇನ ಮುನಿಗಳಿಂದ ಕ್ಷುಲ್ಲಕ ದೀಕ್ಷೆ ಪಡೆದರು. 2021ರಲ್ಲಿ ಗುಲಾಬ ಸೇನ ಮುನಿಗಳಿಂದ ಮುನಿ ದೀಕ್ಷೆ ಪಡೆದರು. 

ADVERTISEMENT

ದೇಹತ್ಯಾಗ ಮಾಡುವುದಕ್ಕಾಗಿ ಅವರು ಯಾವುದೇ ಆಹಾರ, ನೀರು, ಪಾನೀಯ ಸೇವಿಸುತ್ತಿಲ್ಲ.

ಕೋಥಳಿಯ ಆಶ್ರಮದಲ್ಲಿ ದೇಶಭೂಷಣ ಮುನಿಗಳು ಸೇರಿದಂತೆ 40ಕ್ಕೂ ಅಧಿಕ ಜೈನ ಮುನಿಗಳು ಈವರೆಗೆ ಯಮ ಸಲ್ಲೇಖನ ವ್ರತ ಕೈಗೊಂಡು ದೇಹತ್ಯಾಗ ಮಾಡಿದ್ದಾರೆ. ಹಾಗಾಗಿ ಇಡೀ ದೇಶದಲ್ಲೇ ಈ ಆಶ್ರಮ ಖ್ಯಾತಿ ಗಳಿಸಿದೆ.

ಚಿಕ್ಕೋಡಿ ತಾಲ್ಲೂಕಿನ ಕೋಥಳಿ ಗ್ರಾಮದ ದೇಶ ಭೂಷಣ ಆಶ್ರಮದಲ್ಲಿ ಸಲ್ಲೇಖನ ವ್ರತ ಕೈಗೊಂಡಿರುವ ಸಮಾಧಿ ಸೇನ ಮುನಿಗಳ ಬಳಿ ಆಚಾರ್ಯ ಶಾಂತಿ ಸೇನ ಮುನಿಗಳು ಜಿನಮತಿ ಮಾತಾಜಿ ಇದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.