ADVERTISEMENT

‘ಇಂಡಿಯಾ ಬುಕ್ ಆಫ್‌ ರೆಕಾರ್ಡ್ಸ್‌’ನಲ್ಲಿ ಬೆಳಗಾವಿಯ ಆದ್ಯಾ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 15:10 IST
Last Updated 4 ನವೆಂಬರ್ 2019, 15:10 IST
ತಂದೆ ಶಿವರಾಜ ಹಿರೇಮಠ ತಾಯಿ ಪೂಜಾ ಜೊತೆ ಆಧ್ಯಾ ಹಿರೇಮಠ
ತಂದೆ ಶಿವರಾಜ ಹಿರೇಮಠ ತಾಯಿ ಪೂಜಾ ಜೊತೆ ಆಧ್ಯಾ ಹಿರೇಮಠ   

ಬೆಳಗಾವಿ: ಇಲ್ಲಿನ ಅನ್ನಪೂರ್ಣವಾಡಿ ನಿವಾಸಿ ಶಿವರಾಜ ಹಿರೇಮಠ–ಪೂಜಾ ದಂಪತಿಯ ಪುತ್ರಿ ಆಧ್ಯಾ ಹಿರೇಮಠ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೆಸರು ಗಳಿಸಿದ್ದಾಳೆ.

40ಕ್ಕೂ ಹೆಚ್ಚು ಪ್ರಾಣಿ, ಪಕ್ಷಿಗಳನ್ನು ಗುರುತಿಸಿ ಹೆಸರು ಹೇಳುತ್ತಾಳೆ ಹಾಗೂ ಅವುಗಳ ಧ್ವನಿ ಅನುಕರಣೆ ಮಾಡುತ್ತಾಳೆ. ಹಲವು ಹಣ್ಣು, ತರಕಾರಿ, ವಾಹನಗಳು, ಹೂವುಗಳು, ಕೀಟಗಳು, ದೈನಂದಿನ ಚಟುವಟಿಕೆಗಳು ಹಾಗೂ ದೇವತೆಗಳ ಚಿತ್ರ ಗುರುತಿಸಿ ಹೆಸರು ಹೇಳುತ್ತಾಳೆ. ಗಾಂಧೀಜಿ, ಸುಭಾಷ್‌ಚಂದ್ರ ಬೋಸ್, ವಲ್ಲಭಬಾಯಿ ಪಟೇಲ್, ರಾಧಾಕೃಷ್ಣನ್, ಶಾಸ್ತ್ರಿ, ನೆಹರು, ಇಂದಿರಾ ಗಾಂಧಿ, ಡಾ.ಬಿ.ಆರ್‌. ಅಂಬೇಡ್ಕರ್, ನರೇಂದ್ರ ಮೋದಿ ಮೊದಲಾದವರ ಭಾವಚಿತ್ರಗಳನ್ನು ಗುರುತಿಸುತ್ತಾಳೆ. ಇದಕ್ಕಾಗಿ ಮಾನ್ಯತೆ ದೊರೆತಿದೆ.

ಶಿವರಾಜ ಅವರು ಪುತ್ರಿಯ ವಿಡಿಯೊ ಸಿದ್ಧಪಡಿಸಿ ಸಂಸ್ಥೆಯ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದರು. ದಾಖಲೆ ಪರಿಶೀಲಿಸಿದ ಸಂಸ್ಥೆಯವರು, ಪಾಲಕರ ಕೋರಿಕೆ ಮೇರೆಗೆ ಕೊರಿಯರ್‌ನಲ್ಲಿ ಪ್ರಶಸ್ತಿ ಪತ್ರವನ್ನು ಕಳುಹಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.