ADVERTISEMENT

‘ಆದಿಗುರು ಶಂಕರಾಚಾರ್ಯ ಹಿಂದೂ ಧರ್ಮದ ರಕ್ಷಕರು’: ಹಣಮಂತಚಾರ್ಯ ಚಿಪ್ಪಲಕಟ್ಟಿ

​ಪ್ರಜಾವಾಣಿ ವಾರ್ತೆ
Published 19 ಮೇ 2025, 16:25 IST
Last Updated 19 ಮೇ 2025, 16:25 IST
ಹುಕ್ಕೇರಿಯಲ್ಲಿ ಭಾನುವಾರ ಜರುಗಿದ ಆದಿಗುರು ಶಂಕರಾಚಾರ್ಯರ ಜಯಂತಿಯಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು
ಹುಕ್ಕೇರಿಯಲ್ಲಿ ಭಾನುವಾರ ಜರುಗಿದ ಆದಿಗುರು ಶಂಕರಾಚಾರ್ಯರ ಜಯಂತಿಯಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು    

ಹುಕ್ಕೇರಿ: ‘ಹಿಂದೂ ಧರ್ಮ ಅವನತಿ ಅಂಚಿನಲ್ಲಿದ್ದಾಗ ಇಡೀ ದೇಶ ಸುತ್ತಿ ಹಿಂದೂ ಧರ್ಮ ಪುನರುಜ್ಜೀವನ ಮಾಡಿದ ಶ್ರೇಯಸ್ಸು ಆದಿಗುರು ಶಂಕರಾಚಾರ್ಯರಿಗೆ ಸಲ್ಲುವುದು’ ಎಂದು ಹಣಮಂತಚಾರ್ಯ ಚಿಪ್ಪಲಕಟ್ಟಿ ಹೇಳಿದರು.

ಭಾನುವಾರ ಪಟ್ಟಣದ ಕೋಟೆಭಾಗದಲ್ಲಿ ಶಿವಚಿದಂಬರ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಶಂಕರಾಚಾರ್ಯ ಜಯಂತಿಯಲ್ಲಿ ಮಾತನಾಡಿದರು.

‘ಚಿಕ್ಕ ವಯಸ್ಸಿನಲ್ಲಿಯೆ ಸನ್ಯಾಸತ್ವ ಪಡೆದು ವೇದಾಧ್ಯಯನ ಮಾಡಿ ಕೇವಲ 32 ವರ್ಷದಲ್ಲಿ ದೇಶ ಸಂಚರಿಸಿ ಧರ್ಮ ಉಳಿಸಿ ಬೆಳೆಸಿದ್ದಾರೆ  ಯಾವಾಗ ಧರ್ಮಕ್ಕೆ ಸಂಕಷ್ಟ ಎದುರಾಗುವುದೊ ಆವಾಗ, ದಿವ್ಯ ಶಕ್ತಿ ಹುಟ್ಟಿ ಬಂದು ಧರ್ಮದೋದ್ಧಾರ ಮಾಡುವುದು ಎಂದಿದ್ದಾರೆ’ ಎಂದರು.

ADVERTISEMENT

ಪುರೋಹಿತರಾದ ಶ್ರೀಕಾಂತ ಜೋಶಿ, ಶ್ರೀಪಾದ ಜೋಶಿ, ಮಹಾದೇವ ಉಪಾಧ್ಯೆ, ದತ್ತಾತ್ರೆಯ ಜೋಶಿ ನೇತೃತ್ವದಲ್ಲಿ ರುದ್ರಾಭಿಷೇಕ ಜರುಗಿತು. ಮಾಧವ ದೇಶಪಾಂಡೆ ಪೂಜೆ ನೆರವೇರಿಸಿದರು. ನಂತರ ಶಂಕರ ನಾಮಾವಳಿಯನ್ನು ಸಾಮೂಹಿಕವಾಗಿ ಪಠಿಸಲಾಯಿತು. ಶ್ರೀಹರಿ ಭಜನಾ ಮಂಡಳಿಯವರು ಭಜನಾ ಸೇವೆಗೈದರು.

ಸತ್ಕಾರ: ಘಟಪ್ರಭಾ ಶಿವಚಿದಂಬರ ಸೌಹಾರ್ದ ಬ್ಯಾಂಕ್‌ ಅಧ್ಯಕ್ಷ ಶ್ರೀಕಾಂತ ಮಹಾಜನ ಅವರನ್ನು ಸತ್ಕರಿಸಲಾಯಿತು. ಭಕ್ತರಿಗೆ ಸಮಿತಿ ವತಿಯಿಂದ ಮಹಾಪ್ರಸಾದ ವ್ಯವಸ್ಥೆ ಮಾಡಲಾಯಿತು.

ಮುಖಂಡರಾದ ಡಿ.ಎಲ್.ಕುಲಕರ್ಣಿ, ಮಿಲಿಂದ ಕುಲಕರ್ಣಿ, ಗೋವಿಂದ ಮುತಾಲಿಕ, ದತ್ತಾತ್ರೆಯ ಕುಲಕರ್ಣಿ, ಸಂಜೀವ ಮುತಾಲಿಕ, ರಾಘು ಹುಕ್ಕೇರಿ, ಆನಂದ ನಾಡಗೌಡ, ಭಾವುರಾಮ ಕುಲಕರ್ಣಿ, ಡಾ.ಅಭಯ ಕಾಲಕುಂದ್ರಿ, ಪ್ರಸಾದ ಕುಲಕರ್ಣಿ, ವಿನಯ ದೇಸಾಯಿ, ಉಮೇಶ್ ಕುಲಕರ್ಣಿ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.