ADVERTISEMENT

ವೇದಾಂತ ಪರಿಷತ್, ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 5:39 IST
Last Updated 4 ಅಕ್ಟೋಬರ್ 2025, 5:39 IST
ಹಾರೂಗೇರಿ ಪಟ್ಟಣದಲ್ಲಿ 42ನೇ ವೇದಾಂತ ಪರಿಷತ್ ಹಾಗೂ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಭವ್ಯ ಮೆರವಣಿಗೆ ನಡೆಯಿತು  ಪ್ರಜಾವಾಣಿ ಚಿತ್ರ
ಹಾರೂಗೇರಿ ಪಟ್ಟಣದಲ್ಲಿ 42ನೇ ವೇದಾಂತ ಪರಿಷತ್ ಹಾಗೂ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಭವ್ಯ ಮೆರವಣಿಗೆ ನಡೆಯಿತು  ಪ್ರಜಾವಾಣಿ ಚಿತ್ರ   

ಹಾರೂಗೇರಿ: ಪಟ್ಟಣದ ದೇವರಕೊಂಡ ಅಜ್ಜನ ಲೀಲಾ ಮಠದಲ್ಲಿ 42ನೇ ವೇದಾಂತ ಪರಿಷತ್ ಹಾಗೂ ಜಾತ್ರಾ ಮಹೋತ್ಸವಕ್ಕೆ ಶಿವಾನಂದ ಭಾರತಿ ಸ್ವಾಮೀಜಿ ಅವರು ಚನ್ನವೃಷಭೇಂದ್ರರ ಮೂರ್ತಿಗೆ ಸುವರ್ಣ ಕಿರೀಟ ಧಾರಣೆ, ಅಭಿಷೇಕ ಹಾಗೂ ಮಹಾಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಪಟ್ಟಣದ ಜತ್ತ– ಜಾಂಬೋಟಿ ರಾಜ್ಯ ಹೆದ್ದಾರಿಯ ಮೂಲಕ ಸಾಗಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು. ಕುಂಭಹೊತ್ತ ಮಹಿಳೆಯರು, ಸಕಲ ಮಂಗಳ ವಾದ್ಯ ಮೇಳಗಳೊಂದಿಗೆ ಶ್ರೀಗಳನ್ನು ಬರಮಾಡಿಕೊಳ್ಳಲಾಯಿತು. ಮೆರವಣಿಗೆಯುದ್ಧಕ್ಕೂ ಭಕ್ತರು ಆಕರ್ಷಕ ರಂಗೋಲಿ ಚಿತ್ತಾರ ಬಿಡಿಸಿದ್ದರು. 

ಮಠಕ್ಕೆ ಆಗಮಿಸಿದ ನಂತರ 7 ಗಂಟೆಗೆ ವೇದಾಂತ ಪರಿಷತ್ ಉದ್ಘಾಟನೆ, ಭಕ್ತಿ ಸಂಗೀತ, ತದನಂತರ ಮಹಾತ್ಮರಿಂದ ಪ್ರವಚನ, ಕೀರ್ತನೆ ಮಹಾಪೂಜೆ ನೆರವೇರಿತು.

ADVERTISEMENT

ಮಾಜಿ ಶಾಸಕ ಪಿ.ರಾಜೀವ, ಅಪ್ಪಾಸಾಬ ಕುಲಕರ್ಣಿ, ಪುರಸಭೆ ಅಧ್ಯಕ್ಷ ವಸಂತ ಲಾಳಿ, ಉಪಾಧ್ಯಕ್ಷ ಬಸವರಾಜ ಅರಕೇರಿ, ಶಿವಗೊಂಡ ಧರ್ಮಟ್ಟಿ, ನೇಮಣ್ಣ ಕೊತ್ತಲಗಿ, ವಿಠ್ಠಲ ಬಂತಿ, ರಾಜು ಕರ್ಣವಾಡಿ, ಬಾಬು ಪರಮಗೌಡರ, ಲಾಲಸಾಬ ಜಮಾದಾರ, ಗೋಪಾಲ ಧರ್ಮಟ್ಟಿ, ಶಶಿಧರ ಶಿಂಗೆ, ಯಮನಪ್ಪ ಬಂಡಗಾರ, ಹಣಮಂತ ಬೆನ್ನಾಡೆ, ಮೊನೇಶ ಕಂಬಾರ, ಶಿವಾನಂದ ಹೆಳವರ, ವಿಜಯ ಬಂತಿ, ತಮಾಣಿ ಕುರಿ ಪುರಸಭೆ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.