ADVERTISEMENT

ಮುಕ್ತ ಫಿಡೆ ರೇಟಿಂಗ್ ಚೆಸ್‌ ಟೂರ್ನಿ ಆರಂಭ

​ಪ್ರಜಾವಾಣಿ ವಾರ್ತೆ
Published 1 ಮೇ 2019, 15:39 IST
Last Updated 1 ಮೇ 2019, 15:39 IST

ಬೆಳಗಾವಿ: ಇಲ್ಲಿನ ಲಯನ್ಸ್‌ ಕ್ಲಬ್‌ ಆಫ್‌ ಬೆಳಗಾವಿ ಮಿಡ್‌ಟೌನ್‌ ಹಾಗೂ ಜಿಲ್ಲಾ ಚೆಸ್‌ ಸಂಘದ (ಬಿಡಿಸಿಎ) ಸಹಯೋಗದಲ್ಲಿ ಎಸ್‌ಜಿಬಿಐಟಿಯಲ್ಲಿ ಮೇ 5ರವರೆಗೆ ಆಯೋಜಿಸಿರುವ ಅಖಿಲ ಭಾರತ ಮುಕ್ತ ಫಿಡೆ ರೇಟಿಂಗ್ ಚೆಸ್‌ ಟೂರ್ನಿಗೆ ಬುಧವಾರ ಚಾಲನೆ ನೀಡಲಾಯಿತು.

ಎಸ್‌ಜಿಬಿಐಟಿ ಪ್ರಾಂಶುಪಾಲ ಪ್ರೊ.ಸಿದ್ದರಾಮಪ್ಪ ಇಟ್ಟಿ ಉದ್ಘಾಟಿಸಿದರು. ಲಯನ್ಸ್‌ ಕ್ಲಬ್‌ ಅಧ್ಯಕ್ಷ ಅನಿಲ್‌ ದೇಶಪಾಂಡೆ, ವಿದ್ಯಾಧರ ವೀರನಗೌಡರ, ಬಿಡಿಸಿಎ ಸಂಸ್ಥಾಪಕ ಸದಸ್ಯ ಪ್ರಕಾಶ ಕುಲಕರ್ಣಿ, ಅಧ್ಯಕ್ಷ ಪ್ರಸನ್ನ ಜೋಶಿ, ಟೂರ್ನಿಯ ನಿರ್ದೇಶಕ ಬಿ.ಆರ್. ಕುಲಕರ್ಣಿ, ವಕೀಲ ರವೀಂದ್ರ ಚೌಗಲೆ, ಡಾ.ಎಸ್.ಪಿ. ದೇಸಾಯಿ ಭಾಗವಹಿಸಿದ್ದರು.

9 ಸುತ್ತುಗಳ ಈ ಟೂರ್ನಿಯಲ್ಲಿ ₹ 3 ಲಕ್ಷ ಬಹುಮಾನ ನೀಡಲಾಗುವುದು. ಇಂಟರ್‌ನ್ಯಾಷನಲ್‌ ಮಾಸ್ಟರ್‌ಗಳಾದ ತೆಲಂಗಾಣದ ಚಕ್ರವರ್ತಿ ರೆಡ್ಡಿ, ತಮಿಳುನಾಡಿನ ಆರ್‌. ಬಾಲಸುಬ್ರಮಣಿಯನ್‌ ಸೇರಿದಂತೆ 96 ಫಿಡೆ ಶ್ರೇಯಾಂಕದ ಆಟಗಾರರು ಸೇರಿ 168 ಮಂದಿ ಪೈಪೋಟಿ ನೀಡಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.