ADVERTISEMENT

‘ಶೋಷಿತ ವರ್ಗಕ್ಕೆ ನ್ಯಾಯ ನೀಡಿದ ಅಂಬೇಡ್ಕರ್’

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2024, 14:27 IST
Last Updated 15 ಏಪ್ರಿಲ್ 2024, 14:27 IST
ನೇಸರಗಿ ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮ ನಡೆಯಿತು 
ನೇಸರಗಿ ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮ ನಡೆಯಿತು    

ನೇಸರಗಿ: ಅಸ್ಪೃಶ್ಯತೆ ಮತ್ತು ಅಸಮಾನತೆಯ ಆಂದೋಲನ ಪ್ರಾರಂಭಿಸಿ ಶೋಷಿತ ವರ್ಗಕ್ಕೆ ನ್ಯಾಯ ಒದಗಿಸಿದವರು ಬಿ.ಆರ್. ಅಂಬೇಡ್ಕರ್ ಎಂದು ಜೈ ಭೀಮ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ರಮೇಶ ರಾಯಪ್ಪಗೋಳ ಹೇಳಿದರು.

ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಆಯೋಜಿಸಿದ ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಅಂಬೇಡ್ಕರ್ ಅವರ ಬದುಕು ಎಲ್ಲರಿಗೂ ಸ್ಫೂರ್ತಿ. ಸಮಾನತೆ, ಪ್ರಗತಿಯ ಕನಸು ಕಂಡ ಮೇರು ನಾಯಕರಾಗಿದ್ದರು’ ಎಂದರು.

ಈ ಸಂದರ್ಭದಲ್ಲಿ ರುದ್ರಪ್ಪ ರಾಯಪ್ಪಗೋಳ, ಶ್ರೀನಿವಾಸ ಹಮ್ಮನ್ನವರ, ಯಲ್ಲಪ್ಪ ಹಮ್ಮನ್ನವರ, ರಾಘು ಮದೇನ್ನವರ, ಈಶ್ವರ ಮಾಳಗಿ, ವಿನೋದ ರಾಯಪ್ಪಗೋಳ, ಮನೋಜ ಮಾಳಗಿ, ವಿನಾಯಕ ರಾಯಪ್ಪಗೋಳ, ಮಂಜುನಾಥ ರಾಯಪ್ಪಗೋಳ, ಗೌತಮ್ ರಾಯಪ್ಪಗೋಳ, ಪ್ರಕಾಶ ಕೆಳಗಿನಮನಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.