ಚಿಕ್ಕೋಡಿ: ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ನದಿಯ ನೀರಿನ ಮಟ್ಟ ಗಣನೀಯವಾಗಿ ಹೆಚ್ಚುತ್ತಿದ್ದು, ಚಿಕ್ಕೋಡಿ ತಾಲ್ಲೂಕಿನ ಸದಲಗಾ ಪಟ್ಟಣದ ದೂಧಗಂಗಾ ನದಿ ತೀರಕ್ಕೆ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಂಗಳವಾರ ಭೇಟಿ ನೀಡಿ ಸೇತುವೆ ಹಾಗೂ ನೀರಿನ ಮಟ್ಟ ಪರಿಶೀಲಿಸಿದರು.
‘ನಿರಂತರ ಮಳೆಯಿಂದಾಗಿ ನೀರಿನ ಮಟ್ಟ ಇನ್ನೂ ಹೆಚ್ಚುವ ಸಾಧ್ಯತೆ ಇದ್ದು, ಪ್ರವಾಹದ ಮುನ್ನಚ್ಚರಿಕೆಯ ಕಾರಣ ನದಿಯ ತೀರದ ಜನರನ್ನು ಸುರಕ್ಷಿತ ಸ್ಥಳಕ್ಕೆ ತಲುಪಬೇಕು’ ಎಂದು ಅವರು ಹೇಳಿದರು.
ಧರೆಪ್ಪ ಹವಾಲ್ದಾರ, ಅಭಿನಂದನ ಪಾಟೀಲ, ಪ್ರಶಾಂತ ಕರಂಗಳೆ, ಸಂಜಯ ಪಾಟೀಲ, ರಾಜು ಅಮೃತಸಮ್ಮನ್ನವರ, ಚಿದಾನಂದ ಕಮತೆ, ಚಿದಾನಂದ ಸಮಗಾರ, ಶೀರಿಷ ಅಡಕೆ, ಸುಭಾಷ ಕಮತೆ, ನಾರಾಯಣ ವಾಳಕೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.