ADVERTISEMENT

ಡೆಂಗಿ, ಚಿಕೂನ್‌ಗುನ್ಯಾ ನಿರೋಧಕ ಲಸಿಕೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2019, 12:59 IST
Last Updated 11 ಆಗಸ್ಟ್ 2019, 12:59 IST
ಬೆಳಗಾವಿಯಲ್ಲಿ ‘ಸ್ವಚ್ಛ ಬೆಳಗಾವಿ’ ತಂಡದಿಂದ ಭಾನುವಾರ ಹಮ್ಮಿಕೊಂಡಿದ್ದ ಡೆಂಗಿ, ಚಿಕೂನ್‌ಗುನ್ಯಾ ನಿರೋಧಕ ಲಸಿಕೆ ಕಾರ್ಯಕ್ರಮಕ್ಕೆ ಶಾಸಕ ಅಭಯ ಪಾಟೀಲ ಚಾಲನೆ ನೀಡಿದರು
ಬೆಳಗಾವಿಯಲ್ಲಿ ‘ಸ್ವಚ್ಛ ಬೆಳಗಾವಿ’ ತಂಡದಿಂದ ಭಾನುವಾರ ಹಮ್ಮಿಕೊಂಡಿದ್ದ ಡೆಂಗಿ, ಚಿಕೂನ್‌ಗುನ್ಯಾ ನಿರೋಧಕ ಲಸಿಕೆ ಕಾರ್ಯಕ್ರಮಕ್ಕೆ ಶಾಸಕ ಅಭಯ ಪಾಟೀಲ ಚಾಲನೆ ನೀಡಿದರು   

ಬೆಳಗಾವಿ: ‘ಧಾರಾಕಾರ ಮಳೆಯಿಂದಾಗಿ ಡೆಂಗಿ, ಚಿಕೂನ್‌ಗುನ್ಯಾದಂತಹ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುವುದರಿಂದಾಗಿ ದಕ್ಷಿಣ ಮತ ಕ್ಷೇತ್ರ ವ್ಯಾಪ್ತಿಯ ನಿವಾಸಿಗಳಿಗೆ ರೋಗ ನಿರೋಧಕ ಲಸಿಕೆಗಳನ್ನು ನೀಡುವ ಕಾರ್ಯಾಚರಣೆಯನ್ನು ಭಾನುವಾರ ನಡೆಸಲಾಯಿತು’ ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.

‘ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಾರ್ವಜನಿಕ ಸ್ಥಳಗಳು ಹಾಗೂ ಮನೆಗಳಿಗೆ ತೆರಳಿದ ಸ್ವಚ್ಛ ಬೆಳಗಾವಿ ತಂಡದ 123 ಮಂದಿ ಸದಸ್ಯರು ಲಸಿಕೆ ಹಾಕಿದರು. ಶಹಾಪುರ, ವಡಗಾವಿ, ಖಾಸಬಾಗ್, ಹೊಸೂರ, ಅನಗೋಳ, ಉದ್ಯಮಬಾಗ್, ಮರಾಠಾ ಕಾಲೊನಿಗಳ 9,600 ಮಂದಿಗೆ ಲಸಿಕೆ ನೀಡಲಾಗಿದೆ. ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳುವುದಕ್ಕಿಂತಲೂ ಮುಂಚಿತವಾಗಿಯೇ ನಮ್ಮ ತಂಡದ ಸದಸ್ಯರು ಈ ಕಾರ್ಯ ಕೈಗೊಂಡಿದ್ದಾರೆ. ಕ್ಷೇತ್ರದ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT