
ಐಗಳಿ: ‘ಅಥಣಿ ಮತಕ್ಷೇತ್ರದ ಸಂಪೂರ್ಣ ನೀರಾವರಿ ಯೋಜನೆ ಕೊನೆಯ ಹಂತಕ್ಕೆ ಬಂದಿದೆ. ರೈತರ ಸಮಸ್ಯೆ ಬಗೆಹರಿಸಿದ ಶಾಸಕ ಲಕ್ಷ್ಮಣ ಸವದಿ ಈ ಭಾಗದ ಶಕ್ತಿ’ ಎಂದು ಖನಿಜ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್.ಪಾಟೀಲ ಹೇಳಿದರು.
ನಿಗಮ ಅನುದಾನದಲ್ಲಿ ಇಲ್ಲಿನ ಕನಕದಾಸ ವೃತ್ತದಲ್ಲಿ ₹20 ಲಕ್ಷ ವವೆಚ್ಚದ ಕನಕದಾಸ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಈಚೆಗೆ ಭೂಮಿಪೂಜೆ ನೆರವೇರಿಸಿದ ಅವರು, ‘ಖನಿಜ ನಿಗಮದ ಅಧ್ಯಕ್ಷರ ಆಪ್ತ ಕಾರ್ಯದರ್ಶಿಯೂ ಆಗಿರುವ, ಸಹಾಯಕ ಆಯುಕ್ತ ಅಶೋಕ ಮಿರ್ಜಿ ಅವರು ಈ ಗ್ರಾಮದ ಹೆಮ್ಮೆಯ ಪುತ್ರ. ಇವರ ಕಾರ್ಯ ನೋಡಿ ನನಗೆ ಸಂತೋಷವಾಗಿದೆ. ಅವರು ಗ್ರಾಮಕ್ಕೆ ಗ್ರಂಥಾಲಯ ಅಥವಾ ಸಾಂಸ್ಕೃತಿಕ ಭವನ ಮಾಡೋಣ ಎಂದು ತಿಳಿಸಿದಾಗ ತಕ್ಷಣ ₹20 ಲಕ್ಷ ಮಂಜೂರು ಮಾಡಿದ್ದೇನೆ. ಗ್ರಾಮಸ್ಥರು ಇನ್ನೂ ₹10 ಲಕ್ಷ ಕೇಳಿದ್ದಾರೆ. ಅದನ್ನೂ ಮಾಡುತ್ತೇನೆ’ ಎಂದರು.
ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ‘ನಿಗಮದ ಅಧ್ಯಕ್ಷ ಜಿ.ಎಸ್.ಪಾಟೀಲ ಹಿರಿಯ ರಾಜಕಾರಣಿ. ಅವರು ಅವಿಭಕ್ತ ಕುಟುಂಬದಲ್ಲಿ ಇದ್ದಾರೆ. ತಂತ್ರಜ್ಞಾನ ಆಧಾರಿತ ಕೃಷಿ ಪದ್ಧತಿ ಅನುಸರಿಸುತ್ತಾರೆ. ಜವಾರಿ ಆಕಳು ಸಾಕಿದ್ದಾರೆ. ಗ್ರಾಮೀಣರ ಬದುಕು ಅರಿತಿದ್ದಾರೆ’ ಎಂದರು.
‘ಐಗಳಿ ಗ್ರಾಮದ ಅಶೋಕ ಮಿರ್ಜಿ ಅವರು ಸಹಾಯಕ ಆಯುಕ್ತರಾಗಿದ್ದರೂ, ಎಷ್ಟೇ ಉನ್ನತ ಹುದ್ದೆಗೆ ಹೋದರೂ ಗ್ರಾಮವನ್ನು ಮರೆತಿಲ್ಲ. ಇಂಥ ಅಧಿಕಾರಿಗಳು ಮಾದರಿ’ ಎಂದರು.
ಐ.ಎಸ್.ಪಾಟೀಲ, ಧುರೀಣ ಸಿ.ಎಸ್.ನೇಮಗೌಡ, ಭಾರತ ಬ್ಯಾಂಕಿನ ಅಧ್ಯಕ್ಷ ನೂರಅಹ್ಮದ್ ಡೊಂಗರಗಾಂವ, ಅಪ್ಪಾಸಾಬ ಪಾಟೀಲ, ಸಿದ್ದಪ್ಪ ಬಳ್ಳೋಳ್ಳಿ, ಯಲ್ಲಪ್ಪ ಮಿರ್ಜಿ, ಕೃಷ್ಣಾ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಪ್ರಲ್ಹಾದ್ ಪಾಟೀಲ, ಶಿವಾನಂದ ಸಿಂಧೂರ, ಹಣಮಂತ ಕರಿಗಾರ, ಡಾ.ಎಸ್.ಎಸ್.ಸನದಿ, ಹಣಮಂತ ಮಿರ್ಜಿ, ಭರಮಣ್ಣ ಹಿರೇಕುರುಬರ, ಪಿಡಿಒ ರಾಜೇಂದ್ರ ಪಾಠಕ, ಈಶ್ವರ ದಳವಾಯಿ, ಸೈದು ಸುತಗುಂಡಿ, ಸೋಮಣ್ಣ ಬಂಡರಬಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.