ADVERTISEMENT

ಬೆಳಗಾವಿ | ಆಟೊ ಚಾಲಕನ ಮೇಲೆ ಹಲ್ಲೆ: ಗಂಭೀರ ಗಾಯ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2025, 15:54 IST
Last Updated 21 ಏಪ್ರಿಲ್ 2025, 15:54 IST

ಬೆಳಗಾವಿ: ತನ್ನ ಪತ್ನಿಯ ವಾಟ್ಸ್ಆ್ಯ‍ಪ್‌ಗೆ ಮೆಸೇಜ್‌ ಮಾಡಿದ್ದನ್ನು ಪ್ರಶ್ನಿಸಿದ ಆಟೊ ಚಾಲಕರೊಬ್ಬರ ಮೇಲೆ ಯುವಕರ ಗುಂಪು, ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸೋಮವಾರ ತೀವ್ರ ಹಲ್ಲೆ ಮಾಡಿದೆ. ಗಾಯಗೊಂಡ ಚಾಲಕ ಜಿಲ್ಲಾಸ್ಪತ್ರೆ ಸೇರಿದ್ದಾರೆ.

ವಾಸೀಮ್ ಬೇಪಾರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ವೀರಭದ್ರೇಶ್ವರ ನಗರದ ಯುವಕ ತನ್ನ ಪತ್ನಿಗೆ ಪದೇಪದೇ ವಾಟ್ಸ್‌ಆ್ಯಪ್‌ನಲ್ಲಿ ಮೆಸೇಜ್ ಮಾಡಿದ್ದ. ವಾರದ ಹಿಂದೆಯೇ ಮೆಸೇಜ್ ಮಾಡುತ್ತಿದ್ದ ಯುವಕನನ್ನು ಚಾಲಕ ಪ್ರಶ್ನೆ ಮಾಡಿದ್ದರು. ಇದೇ ಸಿಟ್ಟು ಇಟ್ಟುಕೊಂಡು 20 ಸ್ನೇಹಿತರೊಂದಿಗೆ ಬಂದ ಯುವಕ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.

ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಆಟೊ ಚಾಲಕ ಚಹಾ ಕುಡಿಯುತ್ತಿದ್ದ ವೇಳೆ, ಮಾತನಾಡಲು ಬರುವಂತೆ ಯುವಕರು ಕರೆದಿದ್ದರು. ಏಕಾಏಕಿ ಜಂಬೆ ಹಾಗೂ ಬಡಿಗೆಯಿಂದ ಹೊಡೆದರು. ಬಳಿಕ ಇಬ್ಬರೇ ಆರೋಪಿಗಳು ಖುದ್ದಾಗಿ ಮಾರ್ಕೆಟ್‌ ಠಾಣೆಗೆ ಹೋಗಿ ಶರಣಾಗಿದ್ದಾರೆ ಎಂದು ವಾಸೀಮ್ ಅವರ ಸಹೋದರ ಸಲೀಮ್‌ ಮಾಧ್ಯಮಗಳ ಮುಂದೆ ಮಾಹಿತಿ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.