ADVERTISEMENT

‘ಬಾಬರಿ’ ತೀರ್ಪು: ಅಭಿ‍ಪ್ರಾಯಗಳು

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 14:46 IST
Last Updated 30 ಸೆಪ್ಟೆಂಬರ್ 2020, 14:46 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಸತ್ಯಮೇವ ಜಯತೇ

ಬಾಬರಿ ಮಸೀದಿ ಪ್ರಕರಣ ಕುರಿತಂತೆ ಸಿಬಿಐ ವಿಶೇಷ ನ್ಯಾಯಾಲಯವು ನೀಡಿದ ತೀರ್ಪು ಐತಿಹಾಸಿಕವಾಗಿದೆ. ಸತ್ಯಮೇವ ಜಯತೇ ಎನ್ನುವುದು ಸಾಬೀತಾಗಿದೆ. ಬಿಜೆಪಿಯ ಹಿರಿಯ ನಾಯಕರನ್ನು ಸಿಲುಕಿಸುವ ದೊಡ್ಡ ರಾಜಕೀಯ ಹುನ್ನಾರ ನಡೆದಿತ್ತು. ಆದರೆ, ಈ ನ್ಯಾಯ ನಿರ್ಣಯದಿಂದ ಪಟ್ಟಭದ್ರರಿಗೆ ಮುಖಭಂಗವಾಗಿದೆ.

ರಮೇಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ

ADVERTISEMENT

ಪಟ್ಟಭದ್ರರಿಗೆ ಮುಖಭಂಗ

ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯವು ನೀಡಿದ ತೀರ್ಪು ಐತಿಹಾಸಿಕವಾಗಿದೆ ಮತ್ತು ಸತ್ಯಕ್ಕೇ ಜಯ ಎಂಬ ಶ್ರೀರಾಮನ ಧ್ಯೇಯ ವಾಕ್ಯಕ್ಕೆ ಪೂರಕವಾಗಿದೆ. ಸತ್ಯ ಎಂದಿಗೂ ಸತ್ಯವೇ. ಬಿಜೆಪಿಯು ಇದನ್ನೇ ಮೊದಲಿನಿಂದಲೂ ಪ್ರತಿಪಾದಿಸುತ್ತಿತ್ತು. ಈಗ ನ್ಯಾಯದೇವತೆಯೂ ನಮ್ಮ ನಂಬಿಕೆ ಸಾಕ್ಷಾತ್ಕರಿಸಿದಂತಾಗಿದೆ. ತೀರ್ಪಿನಿಂದಾಗಿ ಪಟ್ಟಭದ್ರರಿಗೆ ಮುಖಭಂಗವಾಗಿದೆ.

ಲಕ್ಷ್ಮಣ ಸವದಿ, ಉಪ ಮುಖ್ಯಮಂತ್ರಿ

ಸತ್ಯಕ್ಕೆ ಸಂದ ಜಯ

ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ತೀರ್ಪು ನೀಡಿ, ನಮ್ಮ ಎಲ್ಲ ಹಿರಿಯ ನಾಯ‌ಕರು ಸೇರಿದಂತೆ 32 ಜನ ದೋಷಮುಕ್ತರಾಗಿದ್ದಾರೆ. ಈ ತೀರ್ಪನ್ನು ಸ್ವಾಗತಿಸುತ್ತೇನೆ. ಈ ಮೂಲಕ ಸತ್ಯಕ್ಕೆ ಜಯ ಸಿಕ್ಕಿದೆ.

ಶಂಕರಗೌಡ ಪಾಟೀಲ, ಕರ್ನಾಟಕ ಸರ್ಕಾರದ ವಿಶೇಷ ದೆಹಲಿ ಪ್ರತಿನಿಧಿ

ಮೌಲ್ಯಾಧಾರಿತ ತೀರ್ಪು

ಬಾಬರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪನ್ನು ವಿಶೇಷ ನ್ಯಾಯಾಲಯ ಪ್ರಕಟಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ 32 ಮಂದಿಯನ್ನೂ ನಿರಪರಾಧಿಗಳೆಂದು ಘೋಷಿಸಿದೆ. ನ್ಯಾಯಾಲಯದ ಈ ಮೌಲ್ಯಾಧಾರಿತ ತೀರ್ಪು ಸ್ವಾಗತಾರ್ಹ.

ಅಣ್ಣಾಸಾಹೇಬ ಜೊಲ್ಲೆ, ಸಂಸದ, ಚಿಕ್ಕೋಡಿ

ಸ್ವಾಗತಾರ್ಹ ನಿರ್ಣಯ

ಬಾಬರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪನ್ನು ವಿಶೇಷ ನ್ಯಾಯಾಲಯ ಪ್ರಕಟಿಸಿದ್ದು, ಪ್ರಕರಣದ ಎಲ್ಲಾ 32 ಜನರನ್ನೂ ನಿರ್ದೋಷಿಗಳೆಂದು ಹೇಳಿದೆ. ಸತ್ಯ, ನಿಷ್ಠೆ ಆಧರಿಸಿದ ನ್ಯಾಯಾಂಗ ವ್ಯವಸ್ಥೆಯ ಈ ನಿರ್ಣಯ ಸ್ವಾಗತಾರ್ಹ.

ಶಶಿಕಲಾ ಜಿಲ್ಲೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ

ಸ್ವಾಗತಾರ್ಹವಾದುದು

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ನಾಯಕರಾದ ಎಲ್‌.ಕೆ. ಅಡ್ವಾಣಿ, ಉಮಾಭಾರತಿ ಸೇರಿದಂತೆ 32 ಮುಖಂಡರ ಮೇಲಿದ್ದ ಆರೋಪವನ್ನು ಮುಕ್ತ ಮಾಡಿ ನ್ಯಾಯಾಲಯವು ಮಹತ್ವದ ತೀರ್ಪು ನೀಡಿರುವುದು ಸ್ವಾಗತಾರ್ಹ. ಸತ್ಯಕ್ಕೆ ಸಂದ ಜಯ ಇದಾಗಿದೆ. ಜನರಲ್ಲಿ ನ್ಯಾಯಾಲಯದ ಮೇಲಿನ ವಿಶ್ವಾಸ ಹೆಚ್ಚಾಗಿದೆ.

ಸಂಜಯ ಪಾಟೀಲ, ಅಧ್ಯಕ್ಷ, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.