ಬೈಲಹೊಂಗಲ. 'ಜಿಲ್ಲೆಯ ಅನೇಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶಿಕ್ಷಣ ಸೇವೆ ಒದಗಿಸಿ, ಸಾದಾ ಸೀದಾ ವ್ಯಕ್ತಿತ್ವ ಹೊಂದಿದ ಪ್ರೋ.ಬಿ.ಕೆ.ಮದವಾಲ ಅವರ ಶೈಕ್ಷಣಿಕ ಸೇವೆ ಅಪಾರವಿದೆ' ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ಧರ್ಜೆ ಮಹಿಳಾ ಕಾಲೇಜು, ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ವಯೋನಿವೃತ್ತರಾದ ಪ್ರೋ.ಬಿ.ಕೆ. ಮದವಾಲ ಅವರ ಸೇವಾ ನಿವೃತ್ತಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.
'23 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ವಿದ್ಯೆಯನ್ನು ನೀಡಿ ಐನಾಪುರ, ಸಾವಳಗಿ, ಕಿತ್ತೂರು, ಪ್ರಸಕ್ತ ಬೈಲಹೊಂಗಲ ಸರ್ಕಾರಿ ಪ್ರಥಮ ಧರ್ಜೆ ಮಹಿಳಾ ಕಾಲೇಜು, ಕನ್ನಡ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಾಂಶುಪಾಲರಾಗಿ ಉತ್ತಮ ಕಾರ್ಯ ಮಾಡಿದ್ದಾರೆ. ನೇಸರಗಿ ಗ್ರಾಮದ ಪ್ರತಿಷ್ಠಿತ ರೈತ ಮನೆತನದಿಂದ ಬಂದು ಪರಿಶ್ರಮದಿಂದ ಬೆಳೆದು ಬಂದು ನಿವೃತ್ತಿ ಹೊಂದುತ್ತಿರುವುದು ಹೆಮ್ಮೆಯ ವಿಷಯ. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ' ಎಂದರು.
ಅಥಿತಿ ಡಾ.ಎನ್.ಆರ್. ಪಾಟೀಲ ಮಾತನಾಡಿ ಪ್ರೋ.ಮದವಾಲ ಅವರ ಶಿಕ್ಷಣ ಸೇವೆಯ ಹಾಗೂ ಸರಳ ವ್ಯಕ್ತಿತ್ವದ ಕುರಿತು ಕೊಂಡಾಡಿದರು.
ಪ್ರೋ.ಮದವಾಲ ಕುಟುಂಬವನ್ನು ಸತ್ಕರಿಸಲಾಯಿತು. ಕಾಲೇಜು ಆಡಳಿತ ಮಂಡಳಿ ಸದಸ್ಯರು, ಭೋಧಕ, ಭೋಧಕ್ಕೇತ್ತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.