ADVERTISEMENT

ಬೆಳಗಾವಿ: ಮಠ–ಮಂದಿರಗಳಲ್ಲಿ ದೀಪೋತ್ಸವ ಸಡಗರ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 8:04 IST
Last Updated 21 ನವೆಂಬರ್ 2025, 8:04 IST
ಬೈಲಹೊಂಗಲ ಸಮೀಪದ ಕಾರಿಮನಿ ಗ್ರಾಮದ ಶ್ರೀ ಮಲ್ಲಯ್ಯಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ದೀಪೋತ್ಸವ ಅಂಗವಾಗಿ ಭಕ್ತರು ಗುರುವಾರ ದೀಪ ಹಚ್ಚಿ ಸಂಭ್ರಮಿಸಿದರು.
ಬೈಲಹೊಂಗಲ ಸಮೀಪದ ಕಾರಿಮನಿ ಗ್ರಾಮದ ಶ್ರೀ ಮಲ್ಲಯ್ಯಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ದೀಪೋತ್ಸವ ಅಂಗವಾಗಿ ಭಕ್ತರು ಗುರುವಾರ ದೀಪ ಹಚ್ಚಿ ಸಂಭ್ರಮಿಸಿದರು.   

ಬೈಲಹೊಂಗಲ: ಪಟ್ಟಣವೂ ಸೇರಿದಂತೆ ತಾಲ್ಲೂಕಿನಾದ್ಯಂತ ವಿವಿಧ ಮಠ, ಮಂದಿರಗಳಲ್ಲಿ ಕಾರ್ತೀಕ ಮಾಸದ ಕೊನೆಯ ಅಮಾವಾಸ್ಯೆ ದಿನ ಗುರುವಾರ ಸಾವಿರಾರು ಭಕ್ತರು ಶ್ರದ್ಧೆ–ಭಕ್ತಿಯಿಂದ ದೀಪ ಬೆಳಗಿಸಿ ಸಂಭ್ರಮಿಸಿದರು.

ಪ್ರಾಚೀನ ಇತಿಹಾಸ ಕಲ್ಲಗುಡಿ ರಾಮಲಿಂಗೇಶ್ವರ, ಮೈಲಾರಲಿಂಗೇಶ್ವರ, ಹನುಮಂತ ದೇವರ ದೇವಸ್ಥಾನ, ವೆಂಕಟೇಶ್ವರ, ಸಾಯಿಬಾಬಾ, ಗ್ರಾಮದೇವಿ, ದ್ಯಾಮವ್ವ, ಲಕ್ಷ್ಮೀ, ದುರ್ಗಾದೇವಿ, ಅನ್ನಪೂರ್ಣೇಶ್ವರಿ, ವೆಂಕಟೇಶ್ವರ ದೇವಸ್ಥಾನ ಸೇರಿದಂತೆ ಮಠ, ಮಂದಿರಗಳಲ್ಲಿ ವಿಶೇಷ ಅಲಂಕಾರ, ಪೂಜೆ, ಅರ್ಚನೆ, ಹೋಮ, ಹವನ, ದೀಪ ಹಚ್ಚುವ ಕಾರ್ಯಕ್ರಮಗಳು ನಡೆದವು.

ಸಮೀಪದ ಕಾರಿಮನಿ ಗ್ರಾಮದ ಮಲ್ಲಯ್ಯ ಸ್ವಾಮಿ ದೇವಸ್ಥಾನ, ಸೊಗಲ ಸೋಮೇಶ್ವರ, ಆನಿಗೋಳ ರಾಮಲಿಂಗೇಶ್ವರ, ವಕ್ಕುಂದ ಮಡಿವಾಳೇಶ್ವರ, ಬಸವೇಶ್ವರ ದೇವಾಲಯಕ್ಕೆ ಭಕ್ತರು ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆ, ಅರ್ಚನೆ ಮಾಡಿಸಿದರು. ದೀಪ ಬೆಳಗಿದರು.

ADVERTISEMENT

ಕಾರಿಮನಿ ಮಲ್ಲಯ್ಯಸ್ವಾಮಿ, ಸೊಗಲ ಸೋಮೇಶ್ವರ ದೇವಾಲಯಕ್ಕೆ ರಾಜ್ಯ, ಹೊರ ರಾಜ್ಯಗಳ ಸಾವಿರಾರು ಭಕ್ತರು ಬಂದು ಪ್ರಾರ್ಥನೆ ಸಲ್ಲಿಸಿದರು. ಮಲ್ಲಯ್ಯ ದೇವಸ್ಥಾನದಲ್ಲಿ ವಗ್ಗಯ್ಯರು ಫಠಿಸಿದ ಮಂತ್ರಘೋಷ, ಡಮರುನಾದ ಕೇಳುಗರ ಹೃದಯಭಾರವನ್ನು ಹಗುರ ಮಾಡಿತು. ಮಲ್ಲಯ್ಯಸ್ವಾಮಿ, ಸೊಗಲ ಶಿವಪಾರ್ವತಿ, ಕಲ್ಲಗುಡಿ ರಾಮಲಿಂಗೇಶ್ವರ ಗದ್ದುಗೆ ಥರಥರದ ಪುಷ್ಪಮಾಲೆ, ದೇವಸ್ಥಾನ ಆವರಣ ತಳಿರು, ತೋರಣ, ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿದವು.

ಬೈಲಹೊಂಗಲ ಸಮೀಪದ ಕಾರಿಮನಿ ಗ್ರಾಮದ ಶ್ರೀ ಮಲ್ಲಯ್ಯಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ದೀಪೋತ್ಸವ ಅಂಗವಾಗಿ ಭಕ್ತರು ಗುರುವಾರ ದೀಪ ಹಚ್ಚಿ ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.