ಬೆಳಗಾವಿ: ‘ಬೆಳಗಾವಿ ಜಿಲ್ಲೆ ವಿಭಜನೆಯಾಗಬೇಕು ಎಂಬ ಆಸೆ ನಮಗೂ ಇದೆ. ಯಾವಾಗ ಎಂದು ಹೇಳಲಾಗದು. 10 ವರ್ಷದ ನಂತರ ವಿಭಜಿಸುವ ಬದಲು ಈಗಲೇ ಕ್ರಮವಹಿಸುವುದು ಸೂಕ್ತ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
‘ಜೆ.ಎಚ್.ಪಟೇಲ್ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಜಿಲ್ಲೆ ವಿಭಜನೆಗೆ ಪ್ರಕ್ರಿಯೆ ನಡೆದಿತ್ತು. ಈಗ ಏಳೆಂಟು ಜಿಲ್ಲೆಗಳಲ್ಲಿ ತಲಾ ಐದಾರು ವಿಧಾನಸಭೆ ಕ್ಷೇತ್ರಗಳಷ್ಟೇ ಇವೆ. ಬೆಳಗಾವಿ ವಿಭಜಿಸಿ, 6 ಮತ ಕ್ಷೇತ್ರದಂತೆ ಜಿಲ್ಲೆ ರಚಿಸುವುದು ಸೂಕ್ತ’ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.