ADVERTISEMENT

ಬೆಳಗಾವಿ: 90 ವೃತ್ತಗಳಲ್ಲಿ 256 ಕ್ಯಾಮೆರಾ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 15:32 IST
Last Updated 8 ಆಗಸ್ಟ್ 2022, 15:32 IST
ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ತಾಂತ್ರಿಕ ಕೌಶಲವುಳ್ಳ ಸಿಸಿಟಿವಿ ಕ್ಯಾಮೆರಾ ಅಳವಡಿಗೆಗೆ ಶಾಸಕ ಅಭಯ ಪಾಟೀಲ ಸೋಮವಾರ ಚಾಲನೆ ನೀಡಿದರು
ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ತಾಂತ್ರಿಕ ಕೌಶಲವುಳ್ಳ ಸಿಸಿಟಿವಿ ಕ್ಯಾಮೆರಾ ಅಳವಡಿಗೆಗೆ ಶಾಸಕ ಅಭಯ ಪಾಟೀಲ ಸೋಮವಾರ ಚಾಲನೆ ನೀಡಿದರು   

ಬೆಳಗಾವಿ: ಬೆಳಗಾವಿ ದಕ್ಷಿಣ ಮತಕ್ಷೇತ್ರ ವ್ಯಾಪ್ತಿಯ 90 ವೃತ್ತಗಳಲ್ಲಿ 256 ಗುಣಮಟ್ಟದ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಶಾಸಕ ಅಭಯ ಪಾಟೀಲ ಸೋಮವಾರ ಚಾಲನೆ ನೀಡಿದರು. ₹ 3.20 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಶಹಾಪುರ ಪ್ರದೇಶದ ಬ್ಯಾರಿಸ್ಟರ್ ನಾಥ್ ಪೈ ಚೌಕದಲ್ಲಿ ಸೋಮವಾರ ಕ್ಯಾಮೆರಾಗಳ ಅಳವಡಿಕೆ ಆರಂಭವಾಯಿತು.

ಈ ವೇಳೆ ಮಾತನಾಡಿದ ಶಾಸಕ ಅಭಯ ಪಾಟೀಲ, ಸಂಚಾರ ನಿಯಮ ಉಲ್ಲಂಘನೆ ಮಾಡುವವರ ಮೇಲೆ ನಿಗಾ ಇಡುವುದು, ರಸ್ತೆ ಅಪಘಾತಗಳ ನಿಯಂತ್ರಣ ಹಾಗೂ ಸಂಚಾರದಲ್ಲಿ ಶಿಸ್ತು ಕಾಪಾಡುವ ಉದ್ದೇಶದಿಂದ ಈ ಕ್ಯಾಮೆರಾ ಅಳವಡಿಸಲಾಗುತ್ತಿದೆ. ನಗರ ಮತ್ತು ಉಪನಗರಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದಂತಹ ಘಟನೆಗಳನ್ನು ತಡೆಯುವುದಕ್ಕೂ ಇವು ಸಹಕಾರಿ ಎಂದು ತಿಳಿಸಿದರು.

ADVERTISEMENT

ಈ ಕ್ಯಾಮೆರಾಗಳು ಅತ್ಯಾಧುನಿಕ ತಾಂತ್ರಿಕ ಕೌಶಲ ಹೊಂದಿದ್ದು, ರಾತ್ರಿ ವೇಳೆಯೂ ಸ್ಪಷ್ಟ ಚಿತ್ರೀಕರಣ ಮಾಡಿಕೊಳ್ಳಬಲ್ಲವು. ಈ ರೀತಿ ಒಂದೇ ಕ್ಷೇತ್ರದಲ್ಲಿ 256 ಕ್ಯಾಮೆರಾಗಳನ್ನು ಅಳವಡಿಸಿದ ಕಾಮಗಾರಿಗಳು ದೇಶದಲ್ಲಿ ವಿರಳ ಎಂದೂ ಅವರು ತಿಳಿಸಿದರು.

ಎಸಿಪಿ ಕಟ್ಟಿಮನಿ, ಇನ್‌ಸ್ಪೆಕ್ಟರ್‌ ಬಡಿಗೇರ ಹಾಗೂ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.