ADVERTISEMENT

ಮಹಾಲಿಂಗಪುರ | ಜಂಗಿ ನಿಕಾಲಿ ಕುಸ್ತಿಗಳು ಸೆ.20ಕ್ಕೆ

ಕುಸ್ತಿ, ರಸಮಂಜರಿ ಕಾರ್ಯಕ್ರಮದ ಪ್ರಚಾರ ಸಾಮಗ್ರಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2024, 14:09 IST
Last Updated 17 ಸೆಪ್ಟೆಂಬರ್ 2024, 14:09 IST
ಮಹಾಲಿಂಗಪುರದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೆ ಅಂಗವಾಗಿ ಜಂಗಿ ನಿಕಾಲಿ ಕುಸ್ತಿಗಳು ಹಾಗೂ ಹಾಸ್ಯಸಂಜೆ, ಸಂಗೀತ ರಸಮಂಜರಿ ಕಾರ್ಯಕ್ರಮದ ಪ್ರಚಾರ ಸಾಮಗ್ರಿಗಳನ್ನು ಮುಖಂಡರು ಬಿಡುಗಡೆ ಮಾಡಿದರು 
ಮಹಾಲಿಂಗಪುರದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೆ ಅಂಗವಾಗಿ ಜಂಗಿ ನಿಕಾಲಿ ಕುಸ್ತಿಗಳು ಹಾಗೂ ಹಾಸ್ಯಸಂಜೆ, ಸಂಗೀತ ರಸಮಂಜರಿ ಕಾರ್ಯಕ್ರಮದ ಪ್ರಚಾರ ಸಾಮಗ್ರಿಗಳನ್ನು ಮುಖಂಡರು ಬಿಡುಗಡೆ ಮಾಡಿದರು    

ಮಹಾಲಿಂಗಪುರ: ಪ್ರತಿ ವರ್ಷ ಮಹಾಲಿಂಗೇಶ್ವರ ಜಾತ್ರೆಯ ಮರುರಥೋತ್ಸವದ ದಿನ ನಡೆಯುತ್ತಿದ್ದ ರಾಷ್ಟ್ರಮಟ್ಟದ ಜಂಗಿ ನಿಕಾಲಿ ಕುಸ್ತಿಗಳು ಈ ಬಾರಿ ಮರುರಥೋತ್ಸವದ ನಂತರ ನಡೆಯಲಿವೆ ಎಂದು ಜಾತ್ರಾ ಕಮಿಟಿ ಅಧ್ಯಕ್ಷ ರವಿಗೌಡ ಪಾಟೀಲ ಹೇಳಿದರು.

ಮಂಗಳವಾರ ಪಟ್ಟಣದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೆ ಅಂಗವಾಗಿ ಹಮ್ಮಿಕೊಂಡಿರುವ ಜಂಗಿ ನಿಕಾಲಿ ಕುಸ್ತಿಗಳು ಹಾಗೂ ಹಾಸ್ಯಸಂಜೆ, ಸಂಗೀತ ರಸಮಂಜರಿ ಕಾರ್ಯಕ್ರಮದ ಪ್ರಚಾರ ಸಾಮಗ್ರಿ ಬಿಡುಗಡೆಗೊಳಿಸಿ ಮಾತನಾಡಿದರು.

ಜಾತ್ರೆ ಅಂಗವಾಗಿ ಸೆ.20 ರಂದು ಮಧ್ಯಾಹ್ನ 1 ಗಂಟೆಗೆ ರಾಷ್ಟ್ರಮಟ್ಟದ ಜಂಗಿ ನಿಕಾಲಿ ಕುಸ್ತಿಗಳು ನಡೆಯಲಿವೆ. ‘ಮಹಾನ್ ಭಾರತ ಕೇಸರಿ’ ಜ್ಞಾನೇಶ್ವರ ಜಮದಾಡೆ, ‘ಮಧ್ಯಪ್ರದೇಶ ಕೇಸರಿ’ ದೀಪಕಕುಮಾರ ಹರಿಯಾಣ, ದೇವತಾಪಾ ನೇಪಾಳ, ಅಮಿತಕುಮಾರ ಮಧ್ಯಪ್ರದೇಶ, ‘ದಾವಣಗೆರೆಯ ಡಬಲ್ ಕರ್ನಾಟಕ ಕೇಸರಿ’ ಕಾರ್ತಿಕ ಕಾಟೆ, ‘ಪಂಜಾಬ ಕೇಸರಿ‘ ಜೋಗಿಂದರ್, ‘ಉಪಕರ್ನಾಟಕ ಕೇಸರಿ‘ ಶಿವಾನಂದ ನಿರ್ವಾನಟ್ಟಿ, ‘ಕರ್ನಾಟಕ ಕೇಸರಿ‘ ನಾಗರಾಜ ಬಸಿಡೋನಿ, ಹರಿಯಾಣದ ಲಸುನ್ ಬಾಗವತ್, ಪುಣೆಯ ಆದಿತ್ಯಾ ಪಾಟೀಲ ಸೇರಿದಂತೆ ವಿವಿಧ ಭಾಗದ ಕುಸ್ತಿಪಟುಗಳು ಭಾಗವಹಿಸಲಿದ್ದಾರೆ ಎಂದರು.

ADVERTISEMENT

ಮಹಾಲಿಂಗೇಶ್ವರ ದೇವಸ್ಥಾನದ ಗೋಶಾಲೆ ಹತ್ತಿರ ಸೆ.21 ಹಾಗೂ ಸೆ.22 ರಂದು ರಂದು ಸಂಜೆ 6 ಗಂಟೆಗೆ ಹಾಸ್ಯ ಸಂಜೆ ಮತ್ತು ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಗೋವಿಂದೇಗೌಡ, ಸಂಜು ಬಸಯ್ಯ, ಪಲ್ಲವಿ ಬಳ್ಳಾರಿ, ದಾನಪ್ಪ ಮೂಡಲಗಿ, ದಿವ್ಯಶ್ರೀ, ಜ್ಯೂ.ವಿಷ್ಣುವರ್ಧನ, ಶಿವು ಮುರಗೋಡ ಸೇರಿದಂತೆ ಹಲವಾರು ಕಲಾವಿದರು ಭಾಗವಹಿಸಿದ್ದಾರೆ ಎಂದರು.

ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಲಕ್ಷ್ಮಣಗೌಡ ಪಾಟೀಲ, ಶೇಖರ ಅಂಗಡಿ, ಬಲವಂತಗೌಡ ಪಾಟೀಲ, ಕೃಷ್ಣಗೌಡ ಪಾಟೀಲ, ಮಹಾಲಿಂಗ ತಟ್ಟಿಮನಿ, ನಿಂಗಪ್ಪ ಬಾಳಿಕಾಯಿ, ಶಂಕರಗೌಡ ಪಾಟೀಲ, ಮಹಾಲಿಂಗ ಮಾಳಿ, ಸುನೀಲಗೌಡ ಪಾಟೀಲ, ಶ್ರೀನಿವಾಸ ಮಾಲಬಸರಿ, ರಮೇಶ ಹಂಪಿಹೊಳಿ, ರಾಮಣ್ಣ ಹಟ್ಟಿ, ವಿಠ್ಠಲ ಕುಳಲಿ, ಸಿದ್ದಪ್ಪ ಬೆನ್ನೂರ, ಚನ್ನಪ್ಪ ಬಾಳಿಕಾಯಿ, ಮಲ್ಲು ದಲಾಲ, ಮುತ್ತಪ್ಪ ದಲಾಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.