ADVERTISEMENT

ಬೆಳಗಾವಿ | ವಿದ್ಯಾರ್ಥಿನಿಯರಿಗೆ ಕಿರುಕುಳ: ಮುಖ್ಯ ಶಿಕ್ಷಕನಿಗೆ ಥಳಿತ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 2:42 IST
Last Updated 13 ಡಿಸೆಂಬರ್ 2025, 2:42 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಳಗಾವಿ: ತಾಲ್ಲೂಕಿನ ಬೆಳಗುಂದಿ ಗ್ರಾಮದ ಶಾಲೆಯೊಂದರ ಮುಖ್ಯ ಶಿಕ್ಷಕ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ, ಪಾಲಕರು ಹಾಗೂ ಗ್ರಾಮಸ್ಥರು ಶುಕ್ರವಾರ ಶಾಲೆಗೆ ನುಗ್ಗಿ ಆರೋಪಿಯನ್ನು ಥಳಿಸಿದ್ದಾರೆ.

ಮುಖ್ಯಶಿಕ್ಷಕನಿಂದ ತಮಗೆ ತೀವ್ರ ಕಿರುಕುಳ ಆಗುತ್ತಿದೆ ಎಂದು ವಿದ್ಯಾರ್ಥಿನಿಯರು ಪಾಲಕರ ಬಳಿ ಹೇಳಿದ್ದರು. ಕೋಪಗೊಂಡ ಹಲವು ಜನ ಶುಕ್ರವಾರ ಶಾಲೆಗೆ ನುಗ್ಗಿ ಆರೋಪಿಯನ್ನು ಥಳಿಸಿದರು.

ADVERTISEMENT

ಘಟನೆಯ ಮಾಹಿತಿ ತಿಳಿಯುತ್ತಿದ್ದಂತಯೇ ಸ್ಥಳಕ್ಕೆ ದೌಡಾಯಿಸಿದ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು, ಶಿಕ್ಷಕನನ್ನು ರಕ್ಷಿಸಿ ಕರೆದೊಯ್ಯಲು ಯತ್ನಿಸಿದರು. ಇದನ್ನು ಖಂಡಿಸಿ, ವಿದ್ಯಾರ್ಥಿಯರು ಪೊಲೀಸ್ ವಾಹನದ ಮುಂದೆ ಧರಣಿ ಕುಳಿತರು. ಅವರನ್ನು ಮನೆಗೆ ಕಳಿಸಿದ ಆರೋಪಿಯನ್ನು ಠಾಣೆಗೆ ಕರೆದೊಯ್ದರು.

ಗ್ರಾಮಸ್ಥರು ಮುಖ್ಯ ಶಿಕ್ಷಕನ ಥಳಿಸಿದ್ದು ನಿಜ. ಆದರೆ, ಯಾರೂ ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.