ADVERTISEMENT

ಜನ್ಮದಿನ ಸಂಭ್ರಮಾಚರಣೆ | ಗಾಳಿಯಲ್ಲಿ ಗುಂಡು: ಗ್ರಾ.ಪಂ ಸದಸ್ಯನ ಬಂಧನ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 19:28 IST
Last Updated 29 ಜೂನ್ 2025, 19:28 IST
ಬಾಬಾಜಾನ್ ಕಾಲೆಮುಂಡಾಸೆ
ಬಾಬಾಜಾನ್ ಕಾಲೆಮುಂಡಾಸೆ   

ರಾಯಬಾಗ: ತಾಲ್ಲೂಕಿನ ಕುಡಚಿಯಲ್ಲಿ ಗುರುವಾರ ನಡೆದ ಜನ್ಮದಿನದ ಸಂಭ್ರಮಾಚರಣೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಕುಡಚಿ ಗ್ರಾಮ ಪಂಚಾಯಿತಿ ಸದಸ್ಯ ಬಾಬಾಜಾನ್ ಕಾಲೆಮುಂಡಾಸೆ(48) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. 

‘ಬಾಬಾಜಾನ್‌ ಅವರು ಕೈಯಲ್ಲಿ ಬಂದೂಕು ಹಿಡಿದು, ಗಾಳಿಯಲ್ಲಿ ಗುಂಡು ಹಾರಿಸಿ ಶನಿವಾರ ತಮ್ಮ ಜನ್ಮದಿನ ಆಚರಿಸಿಕೊಂಡಿದ್ದರು. ಕೆಲವರು ಇದರ ವಿಡಿಯೊ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಅದನ್ನು ಆಧರಿಸಿ ಬಂಧಿಸಿದ್ದೇವೆ’ ಎಂದು ಕುಡಚಿ ಪಿಎಸ್‌ಐ ಶಿವರಾಜ ಧರಿಗೊಂಡ ತಿಳಿಸಿದರು.

ತಮ್ಮ ಜನ್ಮದಿನದ ಸಂಭ್ರಮಾಚರಣೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ಬಾಬಾಜಾನ್ ಕಾಲೆಮುಂಡಾಸೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT