ADVERTISEMENT

ಬಿಜೆಪಿಯವರು‌ ಮೊದಲು ತಮ್ಮ ಮನೆ ರಿಪೇರಿ ಮಾಡಿಕೊಳ್ಳಲಿ: ಶಾಸಕ ಎನ್.ಎಚ್.ಕೋನರೆಡ್ಡಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 10:51 IST
Last Updated 30 ಜುಲೈ 2024, 10:51 IST
ಎನ್.ಎಚ್.ಕೋನರೆಡ್ಡಿ 
ಎನ್.ಎಚ್.ಕೋನರೆಡ್ಡಿ    

ನವಿಲುತೀರ್ಥ: 'ಬಿಜೆಪಿಯಲ್ಲೇ ಉತ್ತಮವಾದ ವಾತಾವರಣವಿಲ್ಲ. ಆರ್.ಅಶೋಕ ಮತ್ತು ಬಸನಗೌಡ ಪಾಟೀಲ ಯತ್ನಾಳ ಮಧ್ಯೆ ಎಲ್ಲವೂ ಸರಿ ಇಲ್ಲ. ಆ ಪಕ್ಷದವರು ಮೊದಲು ತಮ್ಮ ಮನೆ ರಿಪೇರಿ(ದುರಸ್ತಿ) ಮಾಡಿಕೊಳ್ಳಲಿ' ಎಂದು ಶಾಸಕ ಎನ್.ಎಚ್.ಕೋನರೆಡ್ಡಿ ತಿರುಗೇಟು ನೀಡಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಮಧ್ಯೆ ಹೊಂದಾಣಿಕೆ ರಾಜಕಾರಣ ಆರೋಪದ ವಿಚಾರಕ್ಕೆ ಇಲ್ಲಿ ಬುಧವಾರ ಸುದ್ದಿಗಾರರಿಗೆ ಅವರು ಹೀಗೆ ಪ್ರತಿಕ್ರಿಯಿಸಿದರು.

'ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ರಾಜ್ಯದ ಎರಡು ಕಣ್ಣುಗಳಿದ್ದಂತೆ. ಇಬ್ಬರೂ ಒಂದಾಗಿಯೇ ಇದ್ದಾರೆ. ಆದರೆ, ಬಿಜೆಪಿಯವರು ಇಬ್ಬರ

ADVERTISEMENT

ಮಧ್ಯೆ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ. ಅವರ ಮಾತಿಗೆ ಬೆಲೆ‌ ಕೊಡುವ ಅವಶ್ಯಕತೆ ಇಲ್ಲ.

ವಿಜಯೇಂದ್ರ ನಾಯಕತ್ವವನ್ನು ನಾವು ಒಪ್ಪುವುದಿಲ್ಲ ಎಂದು ಶಾಸಕರಾದ ರಮೇಶ ಜಾರಕಿಹೊಳಿ, ಯತ್ನಾಳ ಹೇಳಿದ್ದಾರೆ. ಮೊದಲು ತಮ್ಮ ಮನೆ ದುರಸ್ತಿ ಮಾಡಿಕೊಂಡು ನಮ್ಮ ಬಗ್ಗೆ ಅವರು ಮಾತನಾಡಲಿ' ಎಂದರು.

'ಕಾಂಗ್ರೆಸ್‌ನಲ್ಲಿ‌ ಎಲ್ಲರೂ ಒಂದಾಗಿದ್ದೇವೆ. ಸಿ.ಎಂ ಬದಲಾವಣೆ ಕುರಿತು ಈಗ ಚರ್ಚೆ ನ‌ಡೆದಿಲ್ಲ‌. ನಮ್ಮ‌ ಸರ್ಕಾರ ಐದು ವರ್ಷ ಗಟ್ಟಿಮುಟ್ಟಾಗಿರುತ್ತದೆ. ಮುಂದೆಯೂ‌ ನಾವೇ ಅಧಿಕಾರಕ್ಕೆ ಬರುತ್ತೇವೆ.

ಶುದ್ಧವಾಗಿರುವ ನಮ್ಮ ಮನೆ ಒಡೆಯಲು ಪ್ರಯತ್ನಿಸಬೇಡಿ' ಎಂದು ತಿವಿದರು.

ಮುಡಾ ಹಗರಣ ವಿರೋಧಿಸಿ ಬಿಜೆಪಿಯವರು ಪಾದಯಾತ್ರೆ ವಿರೋಧಿಸಿ‌ ನೀವು ಪಾದಯಾತ್ರೆ ಮಾಡುತ್ತೀರಾ ಎಂಬ ಪ್ರಶ್ನೆಗೆ, 'ಅಗತ್ಯಬಿದ್ದರೆ ನಾವು ಮಹದಾಯಿ, ಕಳಸಾ-ಬಂಡೂರಿ, ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡುತ್ತೇವೆ. ಇಂಥ ಸಂಗತಿಗೆ ಮಾಡುವುದಿಲ್ಲ' ಎಂದರು.

'ಕೇಂದ್ರ ಸರ್ಕಾರವು ಈ ಬಜೆಟ್ ನಲ್ಲಿ ನಮಗೆ ಚೊಂಬು ಕೊಟ್ಟಿದೆ. ಬಿಹಾರ್ ಮತ್ತು ಆಂಧ್ರಪ್ರದೇಶಕ್ಕೆ ಕೊಟ್ಟಂತೆ, ‌ನಮಗೇಕೆ ಅನುದಾನ ಕೊಟ್ಟಿಲ್ಲ. ಇದನ್ನು ವಿರೋಧಿಸಿ ರಾಜ್ಯದಲ್ಲಿ ಬಿಜೆಪಿಯವರು ಪಾದಯಾತ್ರೆ ಮಾಡಲಿ' ಎಂದ ಕೋನರೆಡ್ಡಿ, 'ಖಾಲಿ ಕುಳಿತು ಬಿಜೆಪಿಯವರ ಕಾಲು ಹಿಡಿದಿವೆ. ಸ್ವಲ್ಪ ನಡೆದಾಡಲು ಹೋಗುತ್ತಿದ್ದಾರೆ. ಹೋಗಲಿ' ಎಂದು‌ ಕಶಿವಕುಮಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.