ADVERTISEMENT

ಐದನೇ ವರ್ಷದ ಪಾದಯಾತ್ರೆ ಯಶಸ್ವಿ

ಸ್ವಾಭಿಮಾನಿ ಕ್ರೀಯಾಶೀಲ ಗೆಳೆಯರ ಬಳಗ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 2:39 IST
Last Updated 19 ಆಗಸ್ಟ್ 2025, 2:39 IST
ಬೈಲಹೊಂಗಲ ಸಮೀಪದ ಸೊಗಲ ಸೋಮೇಶ್ವರ ದೇವಸ್ಥಾನಕ್ಕೆ ಸ್ವಾಭಿಮಾನಿ ಕ್ರೀಯಾಶೀಲ ಗೆಳೆಯರ ಬಳಗ ಸದಸ್ಯರು ಪಾದಯಾತ್ರೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆ ಸಲ್ಲಿಸಲಾಯಿತು
ಬೈಲಹೊಂಗಲ ಸಮೀಪದ ಸೊಗಲ ಸೋಮೇಶ್ವರ ದೇವಸ್ಥಾನಕ್ಕೆ ಸ್ವಾಭಿಮಾನಿ ಕ್ರೀಯಾಶೀಲ ಗೆಳೆಯರ ಬಳಗ ಸದಸ್ಯರು ಪಾದಯಾತ್ರೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆ ಸಲ್ಲಿಸಲಾಯಿತು   

ಬೈಲಹೊಂಗಲ: ಪಟ್ಟಣದ ಸ್ವಾಭಿಮಾನಿ ಕ್ರೀಯಾಶೀಲ ಗೆಳೆಯರ ಬಳಗದ ವತಿಯಿಂದ ಶ್ರಾವಣ ಮಾಸ ಅಂಗವಾಗಿ ನಡೆದ ಐದನೇ ವರ್ಷದ ಪಾದಯಾತ್ರೆ ಸಮೀಪದ ಸುಕ್ಷೇತ್ರ ಸೊಗಲ ಸೋಮೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆ ತೆರಳುವ ಮೂಲಕ ಭಾನುವಾರ ಯಶಸ್ವಿಯಿಂದ ಮುಕ್ತಾಯಗೊಳಿಸಲಾಯಿತು.

ಒಂದು ತಿಂಗಳು ಕಾಲ ತಾಲ್ಲೂಕಿನ ವಿವಿಧ ಗ್ರಾಮಗಳ ದೇವಸ್ಥಾನಗಳಿಗೆ ಪಾದಯಾತ್ರೆ ತೆರಳಿದ ಸ್ವಾಭಿಮಾನಿ ಕ್ರೀಯಾಶೀಲ ಗೆಳೆಯರ ಬಳಗ ಸದಸ್ಯರು ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.

ದಕ್ಷೀಣ ಕಾಶೀ ಎಂದೆ ಪ್ರಸಿದ್ಧಿ ಪಡೆದ ಸಾಕ್ಷಾತ್ ಶಿವಪಾರ್ವತಿ ದೇವಿ ವಿವಾಹವಾದ ಸ್ಥಳ ಸೊಗಲ ಸೋಮೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆ ತೆರಳಿ ಜಲ ಪೂಜೆ ಮಾಡಿ ಶಿವಪಾರ್ವತಿ ದೇವಿ ಆಶೀರ್ವಾದ ಪಡೆದುಕೊಂಡರು. ನಾಡಿನ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿ ಪೂಜೆ ಮಾಡಿದರು.

ADVERTISEMENT

ಶಿಕ್ಷಕ ಸಂತೋಷ ಹುಣಶೀಕಟ್ಟಿ ಮಾತನಾಡಿ, ‘ಶ್ರಾವಣ ಮಾಸ ಪುಣ್ಯ ಮಾಸ. ಈ ಶುಭ ದಿನಗಳಲ್ಲಿ ಸಮೀಪದ ಗ್ರಾಮಗಳ ದೇವಸ್ಥಾನಗಳಿಗೆ ಶ್ರದ್ಧೆ, ಭಕ್ತಿಯಿಂದ ತೆರಳಿ ಪೂಜೆ ಸಲ್ಲಿಸಲಾಗಿದೆ. ಯುವಕರು ದುಶ್ಚಟಗಳ ದಾಸರಾಗದೆ ಧಾರ್ಮಿಕ ಮನೋಭಾವ ಬೆಳೆಸಿಕೊಂಡು ಸುಂಸ್ಕೃತರಾಗಿ ಬದುಕಿ, ಬಾಳಿ ಸಮಾಜಕ್ಕೆ ಅಗತ್ಯ ಕೊಡುಗೆ ನೀಡಬೇಕಿದೆ. ಈ ಒಂದು ದೃಷ್ಠಿಯಿಂದ ಪಾದಯಾತ್ರೆ ತೆರಳಿ ಸಮಾಜದ ಒಳಿತಿಗಾಗಿ ದೇವರಲ್ಲಿ ಪ್ರಾರ್ಥಿಸಲಾಗಿದೆ’ ಎಂದರು.

ಬಸ್ ನಿರ್ವಾಹಕ ಮಡಿವಾಳಪ್ಪ ಹೊಸೂರ ಪ್ರಸಾದ ಸೇವೆ ಮಾಡಿದರು. ಮಾಜಿ ಸೈನಿಕ ಬಸವರಾಜ ಸರಾಯದ, ಪೊಲೀಸ್ ಸಿಬ್ಬಂದಿಗಳಾದ ಮಂಜುನಾಥ ಕರಿಗಾರ, ಮಲ್ಲಿಕಾರ್ಜುನ ಮಾವಿನಕಟ್ಟಿ, ಕುತುಬು ವಕ್ಕುಂದ, ರಿತೇಶ ಪಾಟೀಲ, ಮಂಜುನಾಥ ಜ್ಯೋತಿ, ಈರಪ್ಪ ಕಾಡೇಶನವರ, ಆನಂದ ತೋಟಗಿ, ಆನಂದ ಹಿರೇಮಠ, ರವಿ ವನ್ನೂರ, ಪ್ರಕಾಶ ಬೆಳಗಾವಿ, ದರ್ಶನ ಸವದತ್ತಿ, ರವಿ ಹುಲಕುಂದ, ಶರೀಫ ನದಾಫ, ಶಿವಾನಂದ ಬಿಸಗುಪ್ಪಿ, ದ್ಯಾಮಣ್ಣಾ ಗೋರಬಾಳ, ಪ್ರವೀಣ ಕಡತಾಳ, ಗುರು ಕಡತಾಳ, ಸಾಯಿನಾಥ ನಾಯ್ಕ, ವಿಶಾಲ ಹೋಮಕರ, ಅರ್ಜುನ ಪೆಂಟೇದ, ಗಣೇಶ ಕರಿಗಾರ, ಶ್ರಾವಣಿ ಕಾಡೇಶನವರ, ಇದ್ದರು.

ಬೈಲಹೊಂಗಲ ಸಮೀಪದ ಸೊಗಲ ಸೋಮೇಶ್ವರ ದೇವಸ್ಥಾನಕ್ಕೆ ಸ್ವಾಭಿಮಾನಿ ಕ್ರೀಯಾಶೀಲ ಗೆಳೆಯರ ಬಳಗ ಸದಸ್ಯರು ಪಾದಯಾತ್ರೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.