ADVERTISEMENT

ನಾಗ್ಜರಿ ನಾಲಾ ವಿಸ್ತರಣೆ; ಜಲ ಸಾರಿಗೆ ಬಳಸಲು ಚಿಂತನೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2020, 17:18 IST
Last Updated 1 ಜೂನ್ 2020, 17:18 IST
ಜಲ ಸಾರಿಗೆ ಸಂಪರ್ಕದ ಸಂಗ್ರಹ ಚಿತ್ರ
ಜಲ ಸಾರಿಗೆ ಸಂಪರ್ಕದ ಸಂಗ್ರಹ ಚಿತ್ರ   

ಬೆಳಗಾವಿ: ಇಲ್ಲಿನ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ 3 ಕಿ.ಮೀ ವ್ಯಾಪ್ತಿಯಿರುವ ನಾಗ್ಜರಿ ನಾಲಾವನ್ನು ವಿಸ್ತರಿಸಿ, ಜಲ ಸಾರಿಗೆ ಸಂಪರ್ಕ (ವಾಟರ್‌ ಪಬ್ಲಿಕ್‌ ಟ್ರಾನ್ಸ್‌ಪೋರ್ಟ್‌) ಕಲ್ಪಿಸುವ ಯೋಜನೆ ರೂಪಿಸುವ ಕುರಿತು ಶಾಸಕ ಅಭಯ ಪಾಟೀಲ ಅವರು ನೀರಾವರಿ ಇಲಾಖೆಯ ಅಧಿಕಾರಿಗಳ ಜೊತೆ ಸೋಮವಾರ ಚರ್ಚಿಸಿದರು.

ಇಲ್ಲಿನ ನೀರಾವರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ‘ನಿತ್ಯಾನಂದ ನಗರ, ಘೋಡ್ಸೆವಾಡಿ, ಜೌಗಲೆವಾಡಿ, ಅಯೋದ್ಯಾ ನಗರ, ಎಸ್‌.ವಿ ಕಾಲೊನಿ, ಶಾಂತಿ ಕಾಲೊನಿ, ಮರಾಠಾ ಕಾಲೊನಿ, ಜಕ್ಕೆರಿ ಹೊಂಡ, ಶಾಸ್ತ್ರೀ ನಗರ, ಕಪಿಲೇಶ್ವರ ಕಾಲೊನಿ, ಮಹಾದ್ವಾರ ರೋಡ ಭಾಗಗಳ ಮೂಲಕ ನಾಲಾ ವಿಸ್ತರಿಸುವುದು. ತದನಂತರ ಅದರಲ್ಲಿ ಬೋಟ್‌ಗಳ ಮೂಲಕ ಜನರ ಸಾಗಾಟಕ್ಕೆ ಅನುಕೂಲ ಕಲ್ಪಿಸಬೇಕಾಗಿದೆ’ ಎಂದು ಹೇಳಿದರು.

‘ಈ ಪರಿಕಲ್ಪನೆಯಿಂದ ಪ್ರವಾಸಿಗರನ್ನು ಆಕರ್ಷಿಸಲು ಸಹಾಯವಾಗುತ್ತದೆ. ರಸ್ತೆ ಸಾರಿಗೆ ಜನದಟ್ಟಣೆ ನಿಯಂತ್ರಿಸುವುದರ ಜೊತೆಗೆ ಇಡೀ ಬೆಳಗಾವಿಗೆ ಆಕರ್ಷಣೆ ತಂದುಕೊಡಲಿದೆ’ ಎಂದರು.

ADVERTISEMENT

ಯೋಜನೆ ಸಾಧ್ಯತೆಯ ಬಗ್ಗೆ ವಿಸ್ತಾರವಾಗಿ ಚರ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.