ADVERTISEMENT

ಶೈಕ್ಷಣಿಕ, ಸಿಇಟಿ ಪ್ರಿಕೌನ್ಸಲಿಂಗ್‌ ಮಾರ್ಗದರ್ಶನ 25ರಂದು

ಪ್ರಜಾವಾಣಿ– ಡೆಕ್ಕನ್‌ ಹೆರಾಲ್ಡ್‌ ಆಯೋಜನೆ;

​ಪ್ರಜಾವಾಣಿ ವಾರ್ತೆ
Published 24 ಮೇ 2019, 12:40 IST
Last Updated 24 ಮೇ 2019, 12:40 IST

ಬೆಳಗಾವಿ: ಎಸ್‌.ಎಸ್‌.ಎಲ್‌.ಸಿ, ಪಿ.ಯು.ಸಿ, ಡಿಗ್ರಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಷೇತ್ರದಲ್ಲಿರುವ ಅವಕಾಶಗಳ ಬಗ್ಗೆ ಹಾಗೂ ಸಿಇಟಿ ಕೌನ್ಸಲಿಂಗ್‌ ಎದುರಿಸುವ ಬಗ್ಗೆ ಮಾರ್ಗದರ್ಶನ ನೀಡಲು ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಸಮೂಹವು ಇದೇ 25ರಂದು ಚಿಕ್ಕೋಡಿಯ ಪಟ್ಟಣ ಪಂಚಾಯ್ತಿ ಕಚೇರಿ ಹಿಂಭಾಗದಲ್ಲಿರುವ ಕೇಶವ ಕಲಾಭವನದಲ್ಲಿ ‘ಶೈಕ್ಷಣಿಕ ಹಾಗೂ ಸಿಇಟಿ ಪ್ರಿ ಕೌನ್ಸಲಿಂಗ್‌ ಮಾರ್ಗದರ್ಶನ’ ಹಮ್ಮಿಕೊಂಡಿದೆ.

ಬೆಳಿಗ್ಗೆ 10ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಚಿಕ್ಕೋಡಿಯ ಡಿಡಿಪಿಯು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಎಸ್‌.ಎಸ್‌.ಎಲ್‌.ಸಿ, ಪಿಯು ಹಾಗೂ ಪದವಿ ಶಿಕ್ಷಣದ ನಂತರ ಇರುವ ಶೈಕ್ಷಣಿಕ ಅವಕಾಶಗಳ ಬಗ್ಗೆ ಉಪನ್ಯಾಸಕ ಮಯೂರ ಬರಗಾಲೆ ಮಾತನಾಡಲಿದ್ದಾರೆ. ಎಂಜಿನಿಯರಿಂಗ್‌ ಕೋರ್ಸ್‌ಗಳ ಬಗ್ಗೆ ಪ್ರಸಾದ ಬಿ. ರಾಂಪುರೆ ಹಾಗೂ ಅರೆವೈದ್ಯಕೀಯ ಕೋರ್ಸ್‌ಗಳ ಬಗ್ಗೆ ಪ್ರವೀಣ ಮಾಹಿತಿ ನೀಡಲಿದ್ದಾರೆ. ಸಿಇಟಿ ಕೌನ್ಸಲಿಂಗ್‌ ಕುರಿತು ತಿಗಡಿ ಅವರು ಮಾಹಿತಿ ನೀಡಲಿದ್ದಾರೆ. ಮಧ್ಯಾಹ್ನ 3 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ.

ಉಚಿತ ಪ್ರವೇಶವಿದ್ದು, ಭಾಗವಹಿಸಲು ಬಯಸುವರು ನೋಂದಣಿ ಮಾಡಿಸಿಕೊಳ್ಳಬೇಕು. ಬೆಳಿಗ್ಗೆ 9ಕ್ಕೆ ನೋಂದಣಿ ಆರಂಭಗೊಳ್ಳಲಿದೆ. ಕಾರ್ಯಕ್ರಮವು 10 ಗಂಟೆಗೆ ಪ್ರಾರಂಭಗೊಳ್ಳಲಿದೆ. ಮೊದಲು ಬಂದವರಿಗೆ ಆದ್ಯತೆ ದೊರೆಯಲಿದೆ. ಹೆಚ್ಚಿನ ಮಾಹಿತಿಗಾಗಿ ದಿವಾಕರ್‌ 94484 68405, ಕಿರಣ ಕಿರದತ್‌ 96069 31746, ರವಿ ಹೆಗಡೆ– 97429 62303 ಅವರನ್ನು ಸಂಪರ್ಕಿಸಬಹುದು.

ADVERTISEMENT

ಸಿಇಟಿ ಫಲಿತಾಂಶ ವೀಕ್ಷಣೆಗೆ ವ್ಯವಸ್ಥೆ:

ಸಿಇಟಿ ಫಲಿತಾಂಶ ವೀಕ್ಷಣೆಗೂ ಇಲ್ಲಿ ವ್ಯವಸ್ಥೆ ಮಾಡಲಾಗಿದೆ. ಕಂಪ್ಯೂಟರ್‌, ಇಂಟರ್‌ನೆಟ್‌ ಎಲ್ಲ ವ್ಯವಸ್ಥೆಯನ್ನು ಮಾಡಲಾಗಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.