ADVERTISEMENT

ತಮಿಳುನಾಡಿಗೆ ನೀರು: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2023, 16:04 IST
Last Updated 12 ಅಕ್ಟೋಬರ್ 2023, 16:04 IST
ತಮಿಳುನಾಡಿಗೆ ಕಾವೇರಿ ನೀರು ಹರಿಸುವದನ್ನು ಖಂಡಿಸಿ ಯಮಕನಮರಡಿ ಉಪತಹಶೀಲ್ದಾರ್ ಸಿ.ಆರ್.ಶೀಗಿಹೊಳಿ ಅವರಿಗೆ ಕರವೇ ಕಾರ್ಯಕರ್ತರರು ಮನವಿ ಸಲ್ಲಿಸಿದರು
ತಮಿಳುನಾಡಿಗೆ ಕಾವೇರಿ ನೀರು ಹರಿಸುವದನ್ನು ಖಂಡಿಸಿ ಯಮಕನಮರಡಿ ಉಪತಹಶೀಲ್ದಾರ್ ಸಿ.ಆರ್.ಶೀಗಿಹೊಳಿ ಅವರಿಗೆ ಕರವೇ ಕಾರ್ಯಕರ್ತರರು ಮನವಿ ಸಲ್ಲಿಸಿದರು   

ಯಮಕನಮರಡಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಯಮಕನಮರಡಿ ಗ್ರಾಮ ಪಂಚಾಯ್ತಿ ಸರ್ಕಲ್ ಬಳಿ ಗುರುವಾರ ಕರವೇ ಯಮಕನಮರಡಿ ಕ್ಷೇತ್ರದ ಯುವ ಘಟಕದ ಕಾರ್ಯಕರ್ತರು ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಿದರು.

ಉಪತಹಶೀಲ್ದಾರ್ ಸಿ.ಆರ್.ಶೀಗಿಹೊಳಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಹುಕ್ಕೇರಿ ತಾಲ್ಲೂಕು ಕರವೇ ಅಧ್ಯಕ್ಷ ಪ್ರಮೋದ ಹೊಸಮನಿ, ‘ರಾಜ್ಯದ ರೈತರಿಗೆ ಮಳೆ ಇಲ್ಲದೆ ಸಂಕಷ್ಟದಲ್ಲಿರುವಾಗ ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ಮಾಡಬೇಕು ಎಂಬ ನಿರ್ಧಾರವನ್ನು ಖಂಡಿಸುತ್ತೇವೆ’ ಎಂದರು.

ಉಪಾಧ್ಯಕ್ಷ ರಾಮಚಂದ್ರ ರೆಂಗಟೆ, ಯಮಕನಮರಡಿ ಕ್ಷೇತ್ರದ ಯುವ ಘಟಕ ಅಧ್ಯಕ್ಷ ವಿನಾಯಕ ಕೋಳಿ, ವಿಶ್ವನಾಥ ಪಾಟೀಲ, ಪ್ರಮೋದ ಕೂಗೆ, ಸದಾನಂದ ಗುಂಡಿ, ಪ್ರೇಮಕುಮಾರ ಪಾಟೀಲ, ಅಡಿವೆಪ್ಪಾ ಮೋಕಾಶಿ, ಮಾರುತಿ ಗುಡದಿ, ಗುರುಪಾದಯ್ಯಾ ಹಿರೇಮಠ, ಬೀಮಾ ಕಲ್ಕುಟಗಿ, ರಮೇಶ ಗೋಣಿ, ಅನೀಲ ಗೋಟರಿ, ನಾಗರಾಜ ಘಸ್ತಿ, ಗಣೇಶ ಕಲ್ಕುಟಗಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.