ADVERTISEMENT

ಬೆಳಗಾವಿ: ಮೃಗಾಲಯಕ್ಕೆ ‍ಪಿಸಿಸಿಎಫ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2021, 15:44 IST
Last Updated 16 ಜನವರಿ 2021, 15:44 IST
ಬೆಳಗಾವಿ ತಾಲ್ಲೂಕಿನ ಭೂತರಾಮನಹಟ್ಟಿಯಲ್ಲಿರುವ ರಾಣಿ ಚನ್ನಮ್ಮ ಮೃಗಾಲಯಕ್ಕೆ ಪಿಸಿಸಿಎಫ್ ಸಂಜಯ ಮೋಹನ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು
ಬೆಳಗಾವಿ ತಾಲ್ಲೂಕಿನ ಭೂತರಾಮನಹಟ್ಟಿಯಲ್ಲಿರುವ ರಾಣಿ ಚನ್ನಮ್ಮ ಮೃಗಾಲಯಕ್ಕೆ ಪಿಸಿಸಿಎಫ್ ಸಂಜಯ ಮೋಹನ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು   

ಬೆಳಗಾವಿ: ತಾಲ್ಲೂಕಿನ ಭೂತರಾಮನಹಟ್ಟಿಯಲ್ಲಿರುವ ರಾಣಿ ಚನ್ನಮ್ಮ ಮೃಗಾಲಯಕ್ಕೆ ಪಿಸಿಸಿಎಫ್ ಸಂಜಯ್‌ ಮೋಹನ್‌ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

ಅಲ್ಲಿಗೆ ಹುಲಿ ಮತ್ತು ಇತರ ವನ್ಯಪ್ರಾಣಿಗಳನ್ನು ತಂದು ಬಿಡಲು ಉದ್ದೇಶಿಸಲಾಗಿದ್ದು, ಅದಕ್ಕಾಗಿ ಮಾಡಿಕೊಂಡಿರುವ ಕಾಂಪೌಂಡ್ ಮೊದಲಾದ ವ್ಯವಸ್ಥೆಯನ್ನು ಪರಿಶೀಲಿಸಿದರು.

ಹುಲಿ, ಸಿಂಹ, ಚಿರತೆ, ಕರಡಿ ಹಾಗೂ ನರಿಗಳನ್ನು ತಂದಿಡಲು ಮಾಡಲಾಗಿರುವ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಬೆಳಗಾವಿ ವೃತ್ತದ ಸಿಸಿಎಫ್ ಬಿ.ವಿ. ಪಾಟೀಲ, ಡಿಸಿಎಫ್‌ಗಳಾದ ಎಂ.ವಿ. ಅಮರನಾಥ, ಅಶೋಕ ಪಾಟೀಲ, ಎಸಿಎಫ್ ಎಂ.ಬಿ. ಕುಸನಾಳ, ಮೃಗಾಲಯದ ಕ್ಯುರೇಟರ್ ರಾಕೇಶ ಅರ್ಜುನವಾಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.