ADVERTISEMENT

ಚನ್ನಮ್ಮನ ಕಿತ್ತೂರು | 'ಪರಿಸರ ರಕ್ಷಣೆ; ಎಲ್ಲರ ಹೊಣೆ'

​ಪ್ರಜಾವಾಣಿ ವಾರ್ತೆ
Published 6 ಜೂನ್ 2024, 5:53 IST
Last Updated 6 ಜೂನ್ 2024, 5:53 IST
ಚನ್ನಮ್ಮನ ಕಿತ್ತೂರಿನ ಕಿತ್ತೂರು ನಾಡ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬುಧವಾರ ಸಸಿ ನೆಡಲಾಯಿತು
ಚನ್ನಮ್ಮನ ಕಿತ್ತೂರಿನ ಕಿತ್ತೂರು ನಾಡ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬುಧವಾರ ಸಸಿ ನೆಡಲಾಯಿತು    

ಚನ್ನಮ್ಮನ ಕಿತ್ತೂರು: ಇಲ್ಲಿನ ಕಿತ್ತೂರು ನಾಡ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಕಾಲೇಜಿನ ಸಭಾಭವನದಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ವಿದ್ಯಾರ್ಥಿ ಒಕ್ಕೂಟ, ರೇಂಜರ್ಸ್‌ ಮತ್ತು ರೋವರ್ಸ್, ಯೂತ್‌ ರೆಡ್ ಕ್ರಾಸ್, ಎನ್.ಸಿ.ಸಿ ಘಟಕದ ಆಶ್ರಯದಲ್ಲಿ ಬುಧವಾರ ವಿಶ್ವ ಪರಿಸರ ದಿನಾಚರಣೆ ನಡೆಯಿತು.

ಪ್ರಾಚಾರ್ಯ ಜಿ.ಕೆ. ಭೂಮನಗೌಡರ ಮಾತನಾಡಿ, ‘ಭೂಮಿ ಸಕಲ ಜೀವಿಗಳಿಗೆ ಆಶ್ರಯತಾಣವಾಗಿದೆ.  ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ, ಅರಣ್ಯ ಮತ್ತು ಜೀವವೈವಿಧ್ಯ ನಾಶದ ಕುರಿತು ಜಾಗೃತಿ ಮೂಡಿಸಿ, ಭೂಮಿಯನ್ನು ರಕ್ಷಿಸಬೇಕಿದೆ’ ಎಂದರು.

ಉಪನ್ಯಾಸಕ ಕೆ.ಆರ್. ಮೆಳವಂಕಿ ಮಾತನಾಡಿದರು. ಎನ್.ಸಿ.ಸಿ ಅಧಿಕಾರಿ ಎಂ.ಜಿ. ಹಿರೇಮಠ, ಸಂಗೀತಾ ತೋಲಗಿ, ಬಿ.ಜಿ. ನಂದನ, ಎಚ್.ಕೆ. ನಾಗರಾಜ, ರೇಂಜರ್ಸ್ ಲೀಡರ್ ಪಿ.ಎಲ್. ಧಾಮೊಣೆ, ಸತೀಶ ಶಹಾಪೂರಮಠ, ಪಿ.ಬಿ. ಹೊನ್ನಪ್ಪನವರ, ನೇತ್ರಾ ಚೌಕಿನಿಶಿ, ಕವಿತಾ ಕುಂಬಾರ, ಹೊನ್ನರಾಜು ಇದ್ದರು.

ADVERTISEMENT
ಚನ್ನಮ್ಮನ ಕಿತ್ತೂರಿನ ಲೇಡಿ ರೋಸರಿ ಶಾಲೆಯಲ್ಲಿ ಬುಧವಾರ ಸಸಿ ನೆಡಲಾಯಿತು. ಪ್ರಾಚಾರ್ಯೆ ಪ್ರಿಯಾ ಶೇಖರ ಕೋಟಿ ದೀಪಕ ಮುತ್ತೂರು ಚಂದ್ರಶೇಖರ ಶೆಟ್ಟಿ ಮಂಜುನಾಥ ಶೀಗನಳ್ಳಿ ಶಿಕ್ಷಕಿ ಜ್ಯೋತಿ ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.