ADVERTISEMENT

ಪರಿಹಾರದ ಚೆಕ್ ವಿತರಣೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 6:07 IST
Last Updated 12 ಸೆಪ್ಟೆಂಬರ್ 2020, 6:07 IST
ಬೆಂಕಿ ಆಕಸ್ಮಿಕದಿಂದ ಮನೆ ಕಳೆದುಕೊಂಡ ಬೆಳಗಾವಿ ತಾಲ್ಲೂಕಿನ ಹಲಗಾದ ಐದು ಕುಟುಂಬಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮಂಜೂರು ಮಾಡಿಸಿದ ಪರಿಹಾರ ಚೆಕ್‌ಗಳನ್ನು ಯುವ ಕಾಂಗ್ರೆಸ್ ಮುಖಂಡ ಚನ್ನರಾಜ ಹಟ್ಟಿಹೊಳಿ ವಿತರಿಸಿದರು
ಬೆಂಕಿ ಆಕಸ್ಮಿಕದಿಂದ ಮನೆ ಕಳೆದುಕೊಂಡ ಬೆಳಗಾವಿ ತಾಲ್ಲೂಕಿನ ಹಲಗಾದ ಐದು ಕುಟುಂಬಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮಂಜೂರು ಮಾಡಿಸಿದ ಪರಿಹಾರ ಚೆಕ್‌ಗಳನ್ನು ಯುವ ಕಾಂಗ್ರೆಸ್ ಮುಖಂಡ ಚನ್ನರಾಜ ಹಟ್ಟಿಹೊಳಿ ವಿತರಿಸಿದರು   

ಬೆಳಗಾವಿ: ಬೆಂಕಿ ಆಕಸ್ಮಿಕದಿಂದ ಮನೆ ಕಳೆದುಕೊಂಡ ತಾಲ್ಲೂಕಿನ ಹಲಗಾ ಗ್ರಾಮದ ಐದು ಕುಟುಂಬಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಮಂಜೂರು ಮಾಡಿಸಿದ್ದಾರೆ.

ಐದು ತಿಂಗಳ ಹಿಂದೆ ಆಕಸ್ಮಿಕ ಬೆಂಕಿ ಅನಾಹುತಕ್ಕೆ ಐದು ಮನೆಗಳು ಆಹುತಿಯಾಗಿದ್ದವು. ಪ್ರತಿ ಕುಟುಂಬಕ್ಕೆ ತಲಾ ₹ 5 ಲಕ್ಷ ಮಂಜೂರಾಗಿದೆ. ಶಾಸಕರ ಅನುಪಸ್ಥಿತಿಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಯುವ ಕಾಂಗ್ರೆಸ್ ಮುಖಂಡ ಚನ್ನರಾಜ ಹಟ್ಟಿಹೊಳಿ ಹಾಗೂ ಪಕ್ಷದ ಕಾರ್ಯಕರ್ತರು ಚೆಕ್‌ಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು.

ಗ್ರಾಮದ ಹಿರಿಯರು, ಸುಕುಮಾರ ಪಾಟೀಲ, ಮಹಾವೀರ ಬೆಲ್ಲದ, ಮಹಾವೀರ ಪಾಟೀಲ, ಶಾಂತು ಬೆಲ್ಲದ, ಕಿರಣ ಹನಮಂತಾಚೆ, ಸುಕುಮಾರ ಹುಡೆದ, ಸಿದ್ದು ತುರಂಗಿ, ಸಾಗರ ಕಾಮನಾಚೆ, ಜ್ಯೋತಿಬಾ ಚೌಗುಲೆ, ಪಿರಾಜಿ ಜಾಧವ್, ಬಾಳು ಕಾಮತಿ, ಪ್ರಶಾಂತ ಶಟವಾಜಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.