ಚಿಕ್ಕೋಡಿ: ‘ಪಠ್ಯದ ಜತೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗುವುದರಿಂದ ವಿದ್ಯಾರ್ಥಿಗಳು ಜ್ಞಾನ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ. ಬಹುಮಾನಕ್ಕಿಂತ ಭಾಗವಹಿಸುವಿಕೆ ಮುಖ್ಯ’ ಎಂದು ಪ್ರಾಚಾರ್ಯ ಬಿ.ಜಿ.ಕುಲಕರ್ಣಿ ಹೇಳಿದರು.
ಪಟ್ಟಣದ ಬಿ.ಕೆ. ಕಾಲೇಜಿನಲ್ಲಿ ಯೋಜನಾ ವೇದಿಕೆ ಮತ್ತು ವಾಣಿಜ್ಯ ಸಂಘಗಳ ಸಹಯೋಗದಲ್ಲಿ ಮುಂಬೈನ ಫೊರಂ ಆಫ್ ಫ್ರೀ ಎಂಟರ್‌ಪ್ರೈಸಸ್ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಭಾಷಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಿಂದ 22 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪಿ.ಜಿ.ಕೊಣ್ಣೂರ, ಪ್ರೊ. ಎಂ.ಎಲ್. ಖಜ್ಜಿಡೋಣಿ ಮತ್ತು ಪ್ರಸಾದ ಆನಂದ ನಿರ್ಣಾಯಕರಾಗಿದ್ದರು.
ಐಕ್ಯೂಎಸಿ ಸಂಯೋಜಕ ವಿ.ವಿ. ಮಂಜಲಾಪುರ, ವಾಣಿಜ್ಯ ವಿಭಾಗದ ಮುಖ್ಯಸ್ಥ ಎನ್.ಬಿ.ಪಾಟೀಲ್, ಲಕ್ಷ್ಮಿಕಾಂತ ನಾಯ್ಕ, ಪ್ರಿಯದರ್ಶಿನಿ ಕೋರೆ, ಪ್ರಜ್ವಲ ಮಾಳಿ, ಅಂಜಲಿ ಕಟ್ಟಿ, ದೇವಿಕಾ ರೋಹಿದಾಸ್, ಸುರಪ್ಪ ಹಾಲಟ್ಟಿ, ನಿಸರ್ಗ ಬೇಡರಟ್ಟಿ, ಯೋಜನಾ ವೇದಿಕೆ ಅಧ್ಯಕ್ಷ ಜೆ.ಎಸ್.ಬಾರಂಗಿಯವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.