ADVERTISEMENT

ಬಾರ್ ಅಂಡ್ ರೆಸ್ಟಾರೆಂಟಿನಲ್ಲಿ ಗಲಾಟೆ: ನಾಲ್ವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 6:28 IST
Last Updated 2 ಆಗಸ್ಟ್ 2022, 6:28 IST

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಪಟ್ಟಣದ ಬಾರ್ ಅಂಡ್ ರೆಸ್ಟಾರೆಂಟ್ ಒಂದರಲ್ಲಿ ಸೋಮವಾರ ರಾತ್ರಿ ಕುಡಿದ ಅಮಲಿನಲ್ಲಿದ್ದ ಕೆಲ ಯುವಕರು ಜಗಳ ತೆಗೆದು ಬಾರ್ ಮಾಲೀಕ ಹಾಗೂ ಕೆಲಸಗಾರರ ಮೇಲೆ ಹಲ್ಲೆ ಮಾಡಿದ್ದಾರೆ.

ಮಾಲೀಕ ವಜ್ರೇಶ್ ಹಾಗೂ ಮೂವರು ಕೆಲಸಗಾರರು ಗಾಯಗೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆಲ ದಿನಗಳ ಹಿಂದೆ ಇದೇ ಗುಂಪಿನ ಯುವಕರು ಇನ್ನೊಂದು ಬಾರಿನಲ್ಲೂ ಮದ್ಯದ ಅಮಲಿನಲ್ಲಿ ದರ್ಪ ತೋರಿಸಿ ಗಲಾಟೆ ಮಾಡಿದ್ದರು. ಈ ಕುರಿತು ಬಾರ್ ಮಾಲೀಕ ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ಬೈಲಹೊಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಗುಂಪಿನ ವಿರುದ್ಧ ಎರಡನೇ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.