ADVERTISEMENT

ಎಪಿಎಂಸಿಗಳನ್ನು ಮುಚ್ಚುವ ಮಾತೇ ಇಲ್ಲ: ಸಚಿವ ಎಸ್‌.ಟಿ. ಸೋಮಶೇಖರ್‌

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2022, 12:05 IST
Last Updated 20 ಏಪ್ರಿಲ್ 2022, 12:05 IST
ಎಸ್‌.ಟಿ. ಸೋಮಶೇಖರ್‌ – ಪ್ರಜಾವಾಣಿ ಸಂಗ್ರಹ ಚಿತ್ರ
ಎಸ್‌.ಟಿ. ಸೋಮಶೇಖರ್‌ – ಪ್ರಜಾವಾಣಿ ಸಂಗ್ರಹ ಚಿತ್ರ   

ಬೆಳಗಾವಿ: ‘ರಾಜ್ಯದಲ್ಲಿ ಎಪಿಎಂಸಿಗಳನ್ನು ಮುಚ್ಚುವ ಮಾತೇ ಇಲ್ಲ’ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಇಲ್ಲಿ ಹೇಳಿದರು.

ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಅವುಗಳಿಂದ ರೈತರಿಗೆ ಬಹಳ ಅನುಕೂಲವಾಗುತ್ತಿದೆ. ಹೀಗಾಗಿ, ಮುಚ್ಚುವುದಿಲ್ಲ’ ಎಂದರು.

ಬಳಿಕ ನಡೆದ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಬೆಳಗಾವಿ ಪ್ರಾಂತೀಯ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಬಡವರು ₹2 ಲಕ್ಷ ಸಾಲ ಪಾವತಿಸಿದ್ದರೆ ಡಂಗುರ ಬಾರಿಸಿ, ಮನೆಗಳಿಗೆ ಹೋಗಿ ವಸೂಲಿ ಮಾಡುತ್ತೀರಿ. ಆದರೆ, ಸೊಸೈಟಿಗಳ ಮೂಲಕ ಶ್ರೀಮಂತರು ಹಾಗೂ ರಾಜಕಾರಣಿಗಳಿಗೆ ನೀಡಿರುವ ₹250 ಕೋಟಿ ಸಾಲ ವಸೂಲಿ ಮಾಡುವ ತಾಕತ್ತಿಲ್ಲವೇ? ಹಾಗಾದರೆ ಅಂಥವರಿಗೆ ಸಾಲ ಕೊಡುತ್ತೀರೇಕೆ? ಎಂದು ಸೊಸೈಟಿಗಳವರನ್ನು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.